Monday, November 2, 2026
Monday, November 2, 2026

ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್: ಉಚಿತ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್: ಉಚಿತ ಆರೋಗ್ಯ ತಪಾಸಣಾ ಶಿಬಿರ

Date:

ಕಾಪು, ನ.2: ಕಾಪುವಿನ ಕೋತಲ್ಕಟ್ಟೆಯಲ್ಲಿರುವ ಡಾ.ಕೆ.ಎಸ್.ಭಟ್ಸ್ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ನಲ್ಲಿ ಐ ನೀಡ್ಸ್ ಸಂಸ್ಥೆ ಹಾಗೂ ದೂತಪಾಪೆಶ್ವರ ಲಿಮಿಟೆಡ್ ಸಹಯೋಗದೊಂದಿಗೆ ನವೆಂಬರ್ 1 ಆದಿತ್ಯವಾರದಂದು ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ, ಉಚಿತ ನೇತ್ರ ತಪಾಸಣೆ, ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ ಜರಗಿತು.

ಆರೋಗ್ಯ ಶಿಬಿರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಡಾ. ನಾಗಾನಂದ ಭಟ್ ಕಾಪು ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸೇವ್ ಲೈಫ್ ಚ್ಯಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರಾದ ಅರ್ಜುನ್ ಭಂಡಾರ್ಕರ್ ಬಂಟ್ವಾಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೂರಕ್ಕೂ ಅಧಿಕ ಸಾರ್ವಜನಿಕರು ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಗೋಪಾಲ್ ಕೃಷ್ಣ ನಾಯಕ್ ಹರಿಖಂಡಿಗೆ, ಲಕ್ಷ್ಮೀಂದ್ರ ಭಟ್ ಕಾಪು, ಮಾಜಿ ಶಾಸಕರಾದ ಲಾಲಾಜಿ ಅರ್ ಮೆಂಡನ್, ದಂಡತೀರ್ಥ ಪ್ರತಿಷ್ಟಾನದ ಮುಖ್ಯಸ್ಥರಾದ ಸೀತಾರಾಂ ಭಟ್, ಕಾಪು ಲಕ್ಷ್ಮೀ ಜನಾರ್ಧನ ದೇವಳದ ಆಡಳಿತ ಮೊಕ್ತೇಸರರಾದ ಹಾಗೂ ಸಾಯಿರಾಧ ಗ್ರೂಪ್ ಮುಖ್ಯಸ್ಥರಾದ ಮನೋಹರ್ ಶೆಟ್ಟಿ, ಕಾಪು ಶ್ರೀ ವೆಂಕಟರಮಣ ಹಾಗೂ ಹಳೆ ಮಾರಿಯಮ್ಮ ದೇವಳದ ಆಡಳಿತ ಮೊಕ್ತೇಸರರಾದ ಪ್ರಸಾದ್ ಗೋಕುಲದಾಸ್ ಶೆಣೈ, ಕಾಪು ಹೊಸ ಮಾರಿಯಮ್ಮ ದೇವಳದ ಆಡಳಿತ ಮೊಕ್ತೇಸರರಾದ ನಡಿಕೆರೆ ರತ್ನಾಕರ್ ಶೆಟ್ಟಿ, ಕೆಎಂಎಫ಼್ ನಿರ್ದೇಶಕರಾದ ದಿವಾಕರ್ ಶೆಟ್ಟಿ, ಕಾಪು ಪುರಸಭಾ ಕೋತಲ್ಕಟ್ಟೆ ವಾರ್ಡ್ ಕೌನ್ಸಿಲರ್ ಸುರೇಶ್, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಮಾಧವ್ ಪಾಲನ್, ಕೋತಾಲ್ಕಟ್ಟೆ ಬಬ್ಬುಸ್ವಾಮಿ ದೈವಸ್ಥಾನ ಮುಖ್ಯಸ್ಥ ಶೀನ, ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಸತೀಶ್ ಕುಂದರ್, ಐನೀಡ್ಸ್ ಆಪ್ಟಿಕಲ್ ಸಂಸ್ಥೆ ಮುಖ್ಯಸ್ಥ ಗಜಾನನ ನಾಯಕ್ ಮತ್ತು ಸಹೋದರರು, ದೂತಪಾಪೆಶ್ವರ ಸಂಸ್ಥೆಯ ನಾಗೇಶ್ ಶೆಣೈ, ಸುಧೀಂದ್ರ ಆಯುರ್ ಕ್ಲಿನಿಕಿನ ಮುಖ್ಯ ಚಿಕಿತ್ಸಕರಾದ ಡಾ.ಸದಾನಂದ ಎಲ್ ಭಟ್, ಡಾ.ಸುಷ್ಮಾ ಎಸ್ ಭಟ್ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ 30 ಹಾಸಿಗೆಯ ಹೊಸ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಕಾಪು, ನ.2: ಕಾಪು ವಿಧಾನಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ 30...

ಅಂಗನವಾಡಿ ಕಂ ಕ್ರಷ್ ಕೇಂದ್ರದ ಕಾರ್ಯಕರ್ತೆ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ನ.2: ಕುಂದಾಪುರ ಶಿಶು ಅಭಿವೃದ್ಧಿ ವ್ಯಾಪ್ತಿಯಲ್ಲಿರುವ 8 ಅಂಗನವಾಡಿ ಕಂ...

ನೇರ ಸಂದರ್ಶನ

ಉಡುಪಿ, ನ.2: ನಗರದ ಮೈತ್ರಿ ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿ...

ತಾರತಮ್ಯವಿಲ್ಲದೆ ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನ: ರಿಜ್ವಾನ್ ಅರ್ಷದ್

ಉಡುಪಿ, ನ.2: ನಮ್ಮೆಲ್ಲರ ಬದುಕು ಭಾರತದ ಸಂವಿಧಾನವನ್ನು ಅವಲಂಬಿಸಿದೆ. ಭಾರತದ ಸಂವಿಧಾನವು...
error: Content is protected !!