Monday, November 2, 2026
Monday, November 2, 2026

ನಾಯಕವಾಡಿ: ಉಚಿತ ಆರೋಗ್ಯ ತಪಾಸಣೆ ಶಿಬಿರ

ನಾಯಕವಾಡಿ: ಉಚಿತ ಆರೋಗ್ಯ ತಪಾಸಣೆ ಶಿಬಿರ

Date:

ಗುಜ್ಜಾಡಿ, ನ.2: ಕರ್ನಾಟಕ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಆಯುಷ್ ಇಲಾಖೆ ಉಡುಪಿ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಗ್ರಾಮ ಪಂಚಾಯತ್ ಗುಜ್ಜಾಡಿ, ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ (ರಿ.) ನಾಯಕವಾಡಿ – ಗುಜ್ಜಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ ದೃಷ್ಟಿ (ಪ್ರ)ದಾನ ಯೋಜನೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಶಿರೂರು ಮುದ್ದು ಮನೆ, ಬಯೋಲಿನ್ ಲ್ಯಾಬೋರೇಟರಿ ಲೈಫ್ ಕೇರ್ ಡಯಾಗ್ನೋಸ್ಟಿಕ್ ಸೆಂಟರ್ ಕುಂದಾಪುರ ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.) ಗುಜ್ಜಾಡಿ, ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 1 2026 ರ ಭಾನುವಾರದಂದು ಉಚಿತ ಆಯುಷ್ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಹಾಗೂ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವು ನಾಯಕವಾಡಿ ಗುಜ್ಜಾಡಿಯ ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು. ಗುಜ್ಜಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಜನ ಮುಖಿ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳಬೇಕು. ಆಗ ಅರೋಗ್ಯವಂತ ಸಮಾಜದ ನಿರ್ಮಾಣವು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಶಂಕರ ಶೆಟ್ಟಿ ನೇತ್ರ ತಪಾಸಣೆಯ ಅಗತ್ಯ ಮತ್ತು ದೊರಕುವ. ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀ ಚೆನ್ನಬಸವೇಶ್ವರ ಯುವಕಮಂಡಲದ ಅಧ್ಯಕ್ಷ ನಿತೇಶ್ ಎನ್‌.ಡಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕರ್ಜೆಯ ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್ ನಾಯ್ಕ್, ಬಯೋ ಲೈನ್ ಲ್ಯಾಬೋರೇಟರಿ ಲೈಫ್ ಕೇರ್ ಡಯಾಗ್ನೋಸ್ಟಿಕ್ ಸೆಂಟರ್ ನ ಸೋಮನಾಥ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಗಂಗೊಳ್ಳಿಯ ಅಧ್ಯಕ್ಷರಾದ ಅರುಣ್ ಕುಮಾರ್ ಬಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಕುಂತಲಾ ಟಿ, ಸಮೃದ್ಧಿ ಸಂಜೀವಿನಿ ಗ್ರಾಮಮಟ್ಟದ ಒಕ್ಕೂಟದ ಅಧ್ಯಕ್ಷೆ ಆಶಾ ರೆಬೆರೋ, ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣಗುರು ಮಂದಿರ ನಾಯಕವಾಡಿಯ ಕೋಶಾಧಿಕಾರಿಗಳಾದ ಶಂಕರ ಪೂಜಾರಿ, ನಿವೃತ್ತ ವೈದ್ಯಾಧಿಕಾರಿಗಳಾದ ಡಾ. ಸುಧಾಕರ್ ಟಿ, ಸಂಗಮೇಶ್ವರ ದೇವಸ್ಥಾನ ದ ಅಧ್ಯಕ್ಷ ರಘುರಾಮ್ ಟಿ, ಚೆನ್ನಬಸವೇಶ್ವರ ಯುವಕ ಮಂಡಲದ ಗೌರವಾಧ್ಯಕ್ಷ ಶ್ರೀನಿವಾಸ್ ಕೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ವೈದ್ಯಾಧಿಕಾರಿಗಳಾದ ಡಾ. ವೀಣಾ ಕಾರಂತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೆನ್ನಬಸವೇಶ್ವರ ಯುವಕ ಮಂಡಲದ ಮಾಜಿ ಅಧ್ಯಕ್ಷ ಶ್ರೀಧರ್ ಎನ್ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ನಿರೂಪಿಸಿ, ನಾಗರಾಜ್ ಎನ್ ಡಿ ವಂದಿಸಿದರು. 378 ಜನರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಬಯೋಲಿನ್ ಲ್ಯಾಬೋರೇಟರಿ ಕುಂದಾಪುರ ಅವರಿಂದ ಉಚಿತ ಥೈರಾಯ್ಡ್ ತಪಾಸಣೆ ನಡೆಯಿತು. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ. ಕಿರಣ್ ಕಾಂಚನ್ ಡಾ. ರಶ್ಮಿ ಮುರಳಿಧರ, ಡಾ. ನಳಿನಿ, ಜೊತೆಯಲ್ಲಿ ಡಾ.ಪ್ರಕಾಶ್ ನಾಯ್ಕ್, ಡಾ. ಸುಧಾಕರ್ ಟಿ., ಡಾ.ವೀಣಾ ಕಾರಂತ್, ಡಾ. ರಶ್ಮಿ ಆರೋಗ್ಯ ತಪಾಸಣೆ ನಡೆಸಿದರು. ಉಚಿತವಾಗಿ ಆಯುರ್ವೇದ ಔಷಧಿಗಳನ್ನ ವಿತರಿಸಲಾಯಿತು. ನೇತ್ರ ತಪಾಸಣೆಯಲ್ಲಿ 50 ಜನರಿಗೆ ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಬರುವಂತೆ ತಿಳಿಸಲಾಯಿತು. 33 ಜನರಿಗೆ ಶಸ್ತ್ರಚಿಕಿತ್ಸೆಗೆ ಒಳಪಡಲು ತಿಳಿಸಿ ದಿನಾಂಕವನ್ನು ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ನಾಡಗೀತೆಯನ್ನು ಮೊಳಗಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ 30 ಹಾಸಿಗೆಯ ಹೊಸ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಕಾಪು, ನ.2: ಕಾಪು ವಿಧಾನಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ 30...

ಅಂಗನವಾಡಿ ಕಂ ಕ್ರಷ್ ಕೇಂದ್ರದ ಕಾರ್ಯಕರ್ತೆ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ನ.2: ಕುಂದಾಪುರ ಶಿಶು ಅಭಿವೃದ್ಧಿ ವ್ಯಾಪ್ತಿಯಲ್ಲಿರುವ 8 ಅಂಗನವಾಡಿ ಕಂ...

ನೇರ ಸಂದರ್ಶನ

ಉಡುಪಿ, ನ.2: ನಗರದ ಮೈತ್ರಿ ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿ...

ತಾರತಮ್ಯವಿಲ್ಲದೆ ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನ: ರಿಜ್ವಾನ್ ಅರ್ಷದ್

ಉಡುಪಿ, ನ.2: ನಮ್ಮೆಲ್ಲರ ಬದುಕು ಭಾರತದ ಸಂವಿಧಾನವನ್ನು ಅವಲಂಬಿಸಿದೆ. ಭಾರತದ ಸಂವಿಧಾನವು...
error: Content is protected !!