Wednesday, November 4, 2026
Wednesday, November 4, 2026

ಯುವ ಪೀಳಿಗೆಗೆ ಕಾರಂತರು ಪ್ರೇರಣೆ: ಕೆ.ಪಿ ಶೆಣೈ

ಯುವ ಪೀಳಿಗೆಗೆ ಕಾರಂತರು ಪ್ರೇರಣೆ: ಕೆ.ಪಿ ಶೆಣೈ

Date:

ಉಡುಪಿ, ನ.2: ಕಾರಂತರು ಪ್ರಕೃತಿಯ ಬಗ್ಗೆ ಅಪಾರವಾದ ಪ್ರೀತಿ ಹೊಂದಿದವರು. ಸಮಾಜದಲ್ಲಿ ಪ್ರತಿ ಹಂತದಲ್ಲೂ ಇರುವ ಕೊರತೆಯನ್ನು ಗುರುತಿಸಿ ಅವುಗಳಲ್ಲಿ ಸುಧಾರಣೆಯನ್ನು ರೂಪಿಸುವ ಮೂಲಕ ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಉತ್ತಮ ಸಮಾಜವನ್ನು ರೂಪಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದವರು. ಕಾರಂತರು ಇಂದಿನ ಯುವಪೀಳಿಗೆ ಪ್ರೇರಣೆ ಎಂದು ಕಾರ್ಕಳ ಎಸ್.ವಿ. ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಕೆ.ಪಿ ಶೆಣೈ ಹೇಳಿದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ ಇಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ-೧೯ ಮತ್ತು ಕಾರಂತ ಕಥನ ರಂಗಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಏಕವ್ಯಕ್ತಿಯಾಗಿ ಬೃಹತ್ ವಿಶ್ವಕೋಶವನ್ನು ರಚಿಸಿದ ಕಾರಂತರು ತಮ್ಮ ಜೀವನದ ಉದ್ದೇಶವನ್ನು ಸ್ಪಷ್ಟವಾಗಿ ಅರಿತವರು. ಇಂದಿನ ಯುವ ಪೀಳಿಗೆಯು ಅವರ ಪುಸ್ತಕವನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಕಲೆ ಸಾಹಿತ್ಯದ ಜೊತೆಗೆ ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕಾರಂತರ ಮೌಲ್ಯಗಳನ್ನು ಎಲ್ಲೆಡೆ ಪಸರಿಸುವುದು ಟ್ರಸ್ಟಿನ ಪ್ರಮುಖ ಉದ್ದೇಶವಾಗಿದೆ ಎಂದರು. ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ಕಾರಂತರ ಕೃತಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ.ಗೀತಾ ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಸೀತಾರಾಮ ನಾಯಕ್ ಉಪಸ್ಥಿತಿರದ್ದರು.

ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಿದ್ಯಾರ್ಥಿನಿ ಸಹನಾ ನಾಯಕ್ ನಿರೂಪಿಸಿ, ನಿರೀಕ್ಷಾ ವಂದಿಸಿದರು. ಕಾರ್ಕಳ ಕರಾವಳಿ ರಂಗಾಯಣದ ರೆಪರ್ಟರಿ ತಂಡದಿಂದ ಕಾರಂತ ಕಥನ ನಾಟಕ ಪ್ರದರ್ಶನಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ ಕಲಾರಂಗಕ್ಕೆ ‘ಸಾಂಸ್ಕೃತಿಕ ಏಕೀಕರಣ’ ಪ್ರಶಸ್ತಿ

ಉಡುಪಿ, ನ.3: 52 ವರ್ಷಗಳಿಂದ ಕಲೆ, ಶಿಕ್ಷಣ, ಸಂಸ್ಕೃತಿ ಸಮಾಜಪರ ಕೆಲಸ...

ಚಿಟ್ಟಾಣಿ ಸಪ್ತಾಹ ಸಮಾರೋಪ ಪ್ರಶಸ್ತಿ ಪ್ರದಾನ

ಉಡುಪಿ, ನ.3: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆರಂಭವಾದ ಚಿಟ್ಟಾಣಿ ಸಂಸ್ಮರಣ...

ರಮೇಶ್ ಕಾಂಚನ್ ನೇತೃತ್ವದಲ್ಲಿ ಪೌರಾಯುಕ್ತರಿಗೆ ಮನವಿ

ಉಡುಪಿ, ನ.3: 31ನೇ ಬೈಲೂರು ವಾರ್ಡಿನ ಮಾಜಿ ನಗರಸಭಾ ಸದಸ್ಯರಾದ ರಮೇಶ್...
error: Content is protected !!