ಕೋಟ, ನ.3: ಪರಿಸರ ಸ್ನೇಹಿ ವಾರಾಂತ್ಯ ಸೇವಾ ಯೋಜನೆಯಾದ ಆನಂದ ಸೃಷ್ಟಿಯ 125ನೇ ವಾರದ ಮೈಲಿಗಲ್ಲಿನ ಅಂಗವಾಗಿ ಭಾನುವಾರ ಬೆಳಿಗ್ಗೆ ಪಡುಕರೆ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಆನಂದ ಸಿ. ಕುಂದರ್ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ನಡೆಯುತ್ತಿರುವ ಆನಂದ ಸೃಷ್ಟಿಯ ಸೇವಾ ಚಟುವಟಿಕೆಗಳ ಭಾಗವಾಗಿ ಆಯೋಜಿಸಲಾದ ಈ ಅಭಿಯಾನದಲ್ಲಿ ಸದಸ್ಯರು ಹಾಗೂ ಸ್ವಯಂಸೇವಕರು ಕಡಲತೀರದ ಸ್ವಚ್ಛತಾ ಕಾರ್ಯದಲ್ಲಿ 31 ಚೀಲ ಕಸವನ್ನು ಸಂಗ್ರಹಿಸಿದರು.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪಡುಕರೆ ರಿಕ್ಷಾ ನಿಲ್ದಾಣಕ್ಕೆ ಡೂಮ್ ಮಿರರ್‌ನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಶಾಂತ್ ಎ. ಕುಂದರ್ ಉಪಸ್ಥಿತಿಯಲ್ಲಿ, ಪಡುಕರೆ ರಿಕ್ಷಾ ನಿಲ್ದಾಣದ ಅಧ್ಯಕ್ಷರಾದ ನಾರಾಯಣ ಮೆಂಡನ್ ಅವರಿಗೆ ಡೂಮ್ ಮಿರರ್ ಹಸ್ತಾಂತರಿಸಲಾಯಿತು.
ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಶ್ರೀನಿವಾಸ್ ಹಾಗೂ ಮಿಥುನ್ ಕುಮಾರ್ ಮತ್ತು ಜನತಾ ಸದಸ್ಯರು ಉಪಸ್ಥಿತರಿದ್ದರು. ರವಿಕಿರಣ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಪಡುಕೋಣೆ ಪ್ರಾಸ್ತಾವಿಕವಾಗಿ ಮಾತನಾಡಿದರು.




By
ForthFocus™