ಕಾರ್ಕಳ, ಅ.14: ಭಾರತೀಯ ಸೇನೆಯಲ್ಲ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೆವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ೧೦ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಾದ ಅನನ್ಯ ಇಲ್ಲೂರು, ಅಯಾನ್ ಡಿ ಭಟ್, ಆಯುಷ್ ಆರ್ ಮೆಂಡನ್, ಆದಿತ್ಯ ವಿರಾಜ್ ಶೆಟ್ಟಿ, ಹರಿಕೀರ್ತನ್ ನಾಯಕ್, ಪ್ರಥಮ್ ಭಂಡಾರಿ, ಪ್ರೀತಮ್ ಮಹೇಶ್ ಗಾಂವಕರ್, ಸೂರ್ಯ ಡಿ ಆರ್, ತರುಣ್ ಬಿ ಎಲ್, ಯಜತ್ ಪಿ ಬಾಲಾಜಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಎನ್.ಡಿ.ಎ ಪ್ರವೇಶ ಪರೀಕ್ಷೆ: ಜ್ಞಾನಸುಧಾದ 10 ವಿದ್ಯಾರ್ಥಿಗಳು ತೇರ್ಗಡೆ
ಎನ್.ಡಿ.ಎ ಪ್ರವೇಶ ಪರೀಕ್ಷೆ: ಜ್ಞಾನಸುಧಾದ 10 ವಿದ್ಯಾರ್ಥಿಗಳು ತೇರ್ಗಡೆ
Date:




By
ForthFocus™