ಉಡುಪಿ, ಅ.13: ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾೖಬ್ರಕಟ್ಟೆ ಯಡ್ತಾಡಿ ಇವರ ಆಶ್ರಯದಲ್ಲಿ 15 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ನಮ್ಮೂರ ದಸರಾ-2026(ಭಕ್ತಿ ಬಣ್ಣದ ಮಾರ್ದನು) ಕಾರ್ಯಕ್ರಮವು ಸಾೖಬ್ರಕಟ್ಟೆಯ ಮಹಾತ್ಮ ಗಾಂಧಿ ಫ್ರೌಡಶಾಲೆಯ ಸಭಾಭವನದಲ್ಲಿ ವೇದಮೂರ್ತಿ ರಾಜೇಶ್ ಐತಾಳ್ ಅವರ ಪೂಜಾ ಮಾರ್ಗದರ್ಶನದಲ್ಲಿ 18-10-2026 ರಿಂದ 21-10-2026 ತನಕ ನಡೆಯಲಿದೆ. 18-10-2026 ರಂದು ಬೆಳಿಗ್ಗೆ 8.15 ಗಂಟೆಯಿಂದ ಸಂಭ್ರಮದ ಮೆರವಣಿಗೆಯ ಮೂಲಕ ಶ್ರೀ ಶಾರದ ದೇವಿಯ ಪೂರ್ಣ ಕುಂಭ ಕಲಶದೊಂದಿಗೆ ವೈಭವದ ಪುರಪ್ರವೇಶ ಹಾಗೂ ಶ್ರೀ ಶಾರದಾಂಬೆಯ ವಿಗ್ರಹ ಪ್ರತಿಷ್ಠಾಪನೆ, 6 ಕಾಯಿ ಗಣಹೋಮ ಸಂಜೆ 6 ರಿಂದ ಅಂಗನವಾಡಿ ಪುಣಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7.30ಕ್ಕೆ ‘ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ’ ಪದ್ಮಶ್ರೀ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ರಾತ್ರಿ 9 ಕ್ಕೆ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ ” ಇವತಲ್ಲ ನಾಳೆ ಗ್ಯಾರಂಟಿ” ಸಾಮಾಜಿಕ ನಗೆ ನಾಟಕ ನಡೆಯಲಿದೆ. 19-10-2026 ಬೆಳಿಗ್ಗೆ 10.00 ರಿಂದ ಸತ್ಯನಾರಾಯಣ ಪೂಜೆ , ಮಹಾಪೂಜೆ ಹಾಗೂ ಸಂಜೆ ಸಾಯಿ ಶಕ್ತಿ ಕಲಾ ಬಳಗ ಉರ್ವ ಮಂಗಳೂರು ಇವರಿಂದ ಜೋಡು ಜೀಟಿಗೆ ನಾಟಕ ನಡೆಯಲಿದೆ, 20 -10-2026 ರಂದು ಬೆಳಿಗ್ಗೆ 10ಕ್ಕೆ ದುರ್ಗಾ ಹೋಮ, ಸಂಜೆ 8 ಕ್ಕೆ ದುರ್ಗಾದೀಪ ನಮಸ್ಕಾರ ನಡೆಯಲಿದ್ದು, 21-10-2026 ಬೆಳಿಗ್ಗೆ 10.00 ಕ್ಕೆ ಚಂಡಿಕಹೋಮ, ಮಧ್ಯಾಹ್ನ 12.30 ಕ್ಕೆ ಅನ್ನ ಸಂತರ್ಪಣೆ ಮಧ್ಯಾಹ್ನ 3 ರಿಂದ ಆಟೋಟ ಸ್ಪರ್ಧೆ, 4 ರಿಂದ ಪುರುಷರು ಮತ್ತು ಮಹಿಳೆಯರಿಗಾಗಿ ಮೊಸರು ಕುಡಿಕೆ ಸ್ಪರ್ಧೆ ಸಂಜೆ 6 ಗಂಟೆಗೆ ಶ್ರೀದೇವಿಯ ವೈಭವದ ಶೋಭಾಯಾತ್ರೆಯ ಮೂಲಕ ಜಲಸ್ತಂಭನ ಎಂದು ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ( ಶಾಮಂತ) ಪೂಜಾರಿ, ಕಾರ್ಯದರ್ಶಿ ಸುಧಾಕರ ನಾಯ್ಕ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶ್ರೀ ವಿನಾಯಕ ಯುವಕ ಮಂಡಲ (ರಿ.) ಸಾೖಬ್ರಕಟ್ಟೆ ಯಡ್ತಾಡಿ 15 ನೇ ವರ್ಷದ ಶಾರದೋತ್ಸವ
ಶ್ರೀ ವಿನಾಯಕ ಯುವಕ ಮಂಡಲ (ರಿ.) ಸಾೖಬ್ರಕಟ್ಟೆ ಯಡ್ತಾಡಿ 15 ನೇ ವರ್ಷದ ಶಾರದೋತ್ಸವ
Date:




By
ForthFocus™