Sunday, November 8, 2026
Sunday, November 8, 2026

ಶ್ರೀಕೃಷ್ಣ ಬಾಲನಿಕೇತನಕ್ಕೆ ಕಂಪ್ಯೂಟರ್ ಕೊಡುಗೆ

ಶ್ರೀಕೃಷ್ಣ ಬಾಲನಿಕೇತನಕ್ಕೆ ಕಂಪ್ಯೂಟರ್ ಕೊಡುಗೆ

Date:

ಉಡುಪಿ, ಅ.19: ಬ್ರಾಡಿ ಕಂಪನಿ ಬೆಂಗಳೂರು ಇವರ ಸಿಎಸ್ ಆರ್ ನಿಧಿಯಿಂದ ಶ್ರೀಕೃಷ್ಣ ಬಾಲನಿಕೇತನದ ಮಕ್ಕಳ ಉಪಯೋಗಕ್ಕಾಗಿ ನಾಲ್ಕು ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದು ಅದರ ಹಸ್ತಾಂತರ ಕಾರ್ಯಕ್ರಮ ಸಂಸ್ಥೆಯ ಅಧ್ಯಕ್ಷ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜರುಗಿತು. ಸ್ವಾಮೀಜಿಯವರು ಮಕ್ಕಳಿಗೆ ಅತ್ಯವಶ್ಯವಾಗಿ ಬೇಕಾಗಿದ್ದ ಕಂಪ್ಯೂಟರನ್ನು ನೀಡಿದಕ್ಕೆ ಬ್ರಾಡಿ ಕಂಪನಿಯ ಅಧಿಕಾರಿಗಳನ್ನು ಅಭಿನಂದಿಸಿ ಅಲ್ಲಿ ಉಪಸ್ಥಿತರಿದ್ದ ಕಂಪನಿಯ ಅಧಿಕಾರಿ ಪ್ರಕಾಶ್ ಆಚಾರ್ಯರನ್ನು ಸನ್ಮಾನಿಸಿದರು. ಪ್ರಕಾಶ್ ಆಚಾರ್ಯರು ಸ್ವಾಮೀಜಿಯವರಿಗೆ ಫಲಕಾಣಿಕೆಯಿತ್ತು ಗೌರವಿಸಿದರು.

ನಂತರ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಬ್ರಾಡಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ವೃಷಕ್ ಶೆಟ್ಟಿಯವರಿಗೆ ಕಂಪನಿಯಲ್ಲಿ ವಾರ್ಷಿಕ ಶ್ರೇಷ್ಠತಾ ಪ್ರಶಸ್ಥಿ ಸಿಕ್ಕಿದ ಬಗ್ಗೆ ಹರಸಿ ಆಶೀರ್ವಚಿಸಿದರು ಮತ್ತು ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹೇಳಿದರು.

ಸಂಸ್ಥೆಯ ಪ್ರೊ. ಕಮಲಾಕ್ಷ, ರಘುರಾಮ ಆಚಾರ್ಯ, ರಾಘವೇಂದ್ರ ರಾವ್, ಗುರುರಾಜ ಭಟ್, ನಾರಾಯಣ ಬಿ.ಕೆ., ಸುಬ್ರಹ್ಮಣ್ಯ ಕಾರಂತ, ಮಾತಾಜಿಯವರು ಮತ್ತು ಮಕ್ಲಳು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ಸಂಯೋಜಿಸಿದ್ದರು. ಇದೇ ಸಂದರ್ಭದಲ್ಲಿ ವಿಶ್ವಜನೀನ ಟ್ರಸ್ಟ್ ಮುಖಾಂತರ ಬ್ರಾಡಿ ಕಂಪನಿಯ ಸಿಎಸ್ ಆರ್ ನಿಧಿಯಿಂದ ಶಿಕ್ಷಕರ ಸಂಬಳದ ಬಗ್ಗೆ ನೀಡಿದ ಸಹಾಯದ ಚೆಕ್ ನ್ನು ಶ್ರೀಗಳವರು ಕುಕ್ಕಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರತ್ನ ಮತ್ತು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಯ ಉದಯಕುಮಾರ ಶೆಟ್ಟಿಯವರಿಗೆ ನೀಡಲಾಯಿತು. ವಿಶ್ವಜನೀನ ಟ್ರಸ್ಟ್ ಇದರ ಜನಾರ್ಧನ ಭಟ್ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಡಾ ಗ್ರಾಮ: ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಾಪು, ನ.8: ಕಾಪು ವಿಧಾನಸಭಾ ಕ್ಷೇತ್ರದ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಟೆಕ್ಸಾಸ್‌ನಲ್ಲಿ ಎಸ್‌ಬಿಐ ಹೊಸ ಶಾಖೆ ಆರಂಭ; ಅಮೆರಿಕದಲ್ಲೂ ಬ್ಯಾಂಕಿಂಗ್ ವಿಸ್ತರಿಸಿದ ಸ್ಟೇಟ್ ಬ್ಯಾಂಕ್

ಯು.ಬಿ.ಎನ್.ಡಿ., ನ.8: ಅಮೆರಿಕದಲ್ಲಿ ಭಾರತದ ಬ್ಯಾಂಕಿಂಗ್ ಉಪಸ್ಥಿತಿಯನ್ನು ಬಲಪಡಿಸುವ ಮತ್ತು ಗ್ರಾಹಕರಿಗೆ...

ಭಾರತದಾದ್ಯಂತ ಇ20 ಪೆಟ್ರೋಲ್ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ: ಪೆಟ್ರೋಲಿಯಂ ಸಚಿವಾಲಯ

ನವದೆಹಲಿ, ನ.8: ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ...

ಯಕ್ಷಗಾನ ಕಲಾರಂಗದ 108ನೇ ಮನೆ ಹಸ್ತಾಂತರ

ಉಡುಪಿ, ನ.8: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್...
error: Content is protected !!