ಕಾರ್ಕಳ, ಜು.30: ಕಾರ್ಕಳ ಜೋಡುರಸ್ತೆಯ ಕುಲಾಲಭವನದ ಸಭಾಂಗಣದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸಿನ ಸಂಘಟನ್ ಸೃಜನ ಅಭಿಯಾನ ಕಾರ್ಯಕ್ರಮ ನಡೆಯಿತು. ಉಡುಪಿ ಜಿಲ್ಲೆಯ ವೀಕ್ಷಕರಾಗಿ ಆಗಮಿಸಿದ್ದ ಅಹಮದಾಬಾದ್‌ನ ಮಾಜಿ ಮೇಯರ್ ಹಾಗೂ ಮಾಜಿ ಶಾಸಕರಾದ ಹಿಮ್ಮತ್‌ಸಿಂಗ್ ಪಟೇಲ್ ಅವರನ್ನು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಕಾರ್ಕಳ ಕಾಂಗ್ರೆಸ್ ಪರವಾಗಿ ಸ್ವಾಗತಿಸಿದರು.
ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅದ್ಯಕ್ಷೆ ಶಾಲೆಟ್ ಪಿಂಟೊ, ಬ್ಲಾಕ್ ಅದ್ಯಕ್ಷರಾದ ಶುಭದ ರಾವ್ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.




By
ForthFocus™