Thursday, July 30, 2026
Thursday, July 30, 2026

ಸಹಸ್ರಕಂಠ ಭಕ್ತಿಗಾಯನ

ಸಹಸ್ರಕಂಠ ಭಕ್ತಿಗಾಯನ

Date:

ಉಡುಪಿ, ಜು.30: ಪರ್ಯಾಯ ಶ್ರೀ ಶೀರೂರು ಮಠ ಶ್ರೀ ಕೃಷ್ಣಮಠದ ಆಶ್ರಯದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥರಿಗೆ ಗುರು ಅಭಿವಂದನೆ ಹಾಗೂ ಸಹಸ್ರಕಂಠ ಭಕ್ತಿಗಾಯನ ಕಾರ್ಯಕ್ರಮ ನಡೆಯಿತು. ರಾಜಾಂಗಣದಲ್ಲಿ ಉದ್ಘಾಟನೆಗೊಂಡ ಈ ಕಾರ್ಯಕ್ರಮ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮತ್ತು ದಾಸನಮನ ತಂಡ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆಯಿತು.

ದಾಸನಮನ ತಂಡದ ಸುಮಾರು ಆರುನೂರಕ್ಕೂ ಹೆಚ್ಚು ಮಂದಿ ಆಗಮಿಸಿ ಕುಣಿತ ಭಜನೆ ಹಾಗೂ ಸಹಸ್ರ ಕಂಠ ಗೀತಗಾಯನದಲ್ಲಿ ಭಾಗವಹಿಸಿದರು. ಶ್ರೀ ವೇದವರ್ಧನತೀರ್ಥರಿಗೆ ಗುರು ಅಭಿನಂದನೆಯ ಈ ಕಾರ್ಯಕ್ರಮದಲ್ಲಿ ಪರ್ಯಾಯ ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ, ಟಿಟಿಡಿ ಯ ದೃಶ್ಯವಾಹಿನಿಯ ಮುಖ್ಯಸ್ಥ ಗುಂಡುರಾವ್, ಭಜನಾ ಪರಿಷತ್ ನ ಸಂತೋಷ್ ಪಿ ಅಳಿಯೂರು, ದಾಸನಮನ ತಂಡದ ಸುಭಾಷಿಣಿ, ಗೀತಾಮಣಿ ಆರ್. ಕೆ., ರಶ್ಮೀ ಹಾಗೂ ಉಡುಪಿಯ ಡಾ.ಉಷಾ ಹೆಬ್ಬಾರ್, ಶೋಭಾ ಉಪಾಧ್ಯ‌ ಮೊದಲಾದವರು ಭಾಗವಹಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕ್ರೀಡಾ ಇಲಾಖೆ ವಿವಿಧ ಯೋಜನೆ: ಅರ್ಜಿ ಅವಧಿ ವಿಸ್ತರಣೆ

ಉಡುಪಿ, ಜು.30: 2025ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ...

ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜು.30: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ವಿಪ್ರ ಸ್ವ-ಉದ್ಯಮ...

ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ

ಕೋಟ, ಜು.30: ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆಯು ಮಂಗಳವಾರ...

ಬಾರ್ಕೂರು: ‘ಸಾಹಿತ್ಯ ಮತ್ತು ಜೀವನ ದರ್ಶನ’ ವಿಶೇಷ ಉಪನ್ಯಾಸ

ಬಾರ್ಕೂರು, ಜು.30: ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ...
error: Content is protected !!