ಕೋಟ, ಜು.30: ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆಯು ಮಂಗಳವಾರ ಕೋಟತಟ್ಟು ಪಡುಕರೆಯ ಶ್ರೀ ಸದ್ಯೋಜಾತ ದೇಗುಲದ ಸಭಾಂಗಣದಲ್ಲಿ ಜರಗಿತು. ಇತ್ತೀಚಿಗೆ ನಿಧನರಾದ ಸಂಘದ ಸ್ಥಳ ದಾನಿ ರತ್ನಾಕರ ಐತಾಳ್ ಇವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂಘದ 25-26ನೇ ಸಾಲಿನಲ್ಲಿ ರೂ 3,81,893. 29 ನಿವ್ವಳ ಲಾಭ ಗಳಿಸಿದ್ದು ಅದರಲ್ಲಿ ಉತ್ಪಾದಕರಿಗೆ ಶೇ.65% ಬೋನಸ್ ರೂಪದಲ್ಲಿ 1 ಲೀಟರ್ ಹಾಲಿಗೆ ರೂ.2.34 ಪೈಸೆಯಂತೆ ಹಾಗೂ ಶೇಕಡಾ 25 ಡಿವಿಡೆಂಟ್ ಒಟ್ಟಿಗೆ 1,85,900ರೂ ಗಳನ್ನು ವಿಂಗಡಿಸಿ ಉತ್ಪಾದಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾದ ಬಗ್ಗೆ ಸಭೆಯ ಗನಮಕ್ಕೆ ತರಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘ ಮಂಗಳೂರು ಇದರ ವಿಸ್ತರಣಾಧಿಕಾರಿ ಉಮೇಶ್ ಕುಂದರ್ ಒಕ್ಕೂಟದಿಂದ ಸಿಗುವ ಸವಲತ್ತುಗಳ ಕುರಿತು ವಿವರವಾಗಿ ಸದಸ್ಯರಿಗೆ ತಿಳಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ತಮ ಗುಣಮಟ್ಟದ ಹಾಲನ್ನು ನೀಡಿ ಸಂಘದ ಅಭಿವೃದ್ಧಿಗೆ ಸಹಕರಿಸಿ ಮುಂದಿನ ಪೀಳಿಗೆಗೆ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಸಾಸ್ತಾನ ಶಿಬಿರ ವ್ಯಾಪ್ತಿಯ ಪಶು ವೈದ್ಯಾಧಿಕಾರಿ ನಿಜಾಮ್ ಪಟೇಲ್ ರಾಸು ಸಾಕಾಣಿಕೆ ಹಾಗೂ ಅವುಗಳಲ್ಲಿ ಕಂಡು ಬರುವ ಪ್ರಮುಖ ಕಾಯೆಲೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಮೂರು ಸದಸ್ಯರಿಗೆ ನಗದು ಪ್ರೊತ್ಸಾಹ ನೀಡಿ ಗೌರವಿಸಲಾಯಿತು. ಆಡಳಿತ ಮಂಡಳಿಯ ನಿರ್ಣಯಯದಂತೆ ಹೊಸದಾಗಿ ರಾಸು ಖರೀದಿಸುವ ಸದಸ್ಯರಿಗೆ ಅಭಿವೃದ್ಧಿನಿಧಿಯಿಂದ ರೂ.೫೦೦೦ ನೀಡುವ ಕುರಿತು ತೀರ್ಮಾನಿಸಲಾಯಿತು. ಇದರ ಆರಂಭಿಕ ಯೋಜನೆಯನ್ನು ಸಂಘದ ಸದಸ್ಯ ಶೈಲಜಾ ಇವರಿಗೆ ಸಾಂಕೇತಿಕವಾಗಿ ನೀಡಲಾಯಿತು.
ಸಂಘದ ಅಧ್ಯಕ್ಷ ಕೆ.ಶಿವಮೂರ್ತಿ ಅಧ್ಯಕ್ಷತೆ ವಹಿಸಿ ದಕ್ಷಿಣ ಕನ್ನಡ ಹಾಲು ಉತ್ಪದಕಾರ ಒಕ್ಕೂಟ ಮಂಗಳೂರು ಇವರಿಂದ ಪ್ರಾಥಮಿಕ ಸಂಘಗಳಿಗೆ ಪ್ರೊತ್ಸಾಹ ಮಾಡುವ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಆರ್ಥಿಕ ವರ್ಷದಲ್ಲಿ 300 ಲೀಟರ್ ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ ಸಂಘದ ಅಭಿವೃದ್ಫಿಯಲ್ಲಿ ಸಹಕರಿಸಿ ಎಂದು ಸದಸ್ಯರಲ್ಲಿ ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಎಂ. ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಸಂಘದ ವರದಿ ವಾಚಿಸಿ ವಂದಿಸಿದರು.




By
ForthFocus™