Tuesday, October 13, 2026
Tuesday, October 13, 2026

ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

Date:

ಉಡುಪಿ, ಜು.30: ಕಿನ್ನಿಮೂಲ್ಕಿಯ ಶಾಂತಾ ಬಿಲ್ಡಿಂಗ್ ನಲ್ಲಿ ಕಾರ್ಯಾರಂಭ ನಡೆಸುತ್ತಿರುವ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಶ್ಯಾಮಿಲಿ ಸಮೂಹದ ಸಂಸ್ಥಾಪಕ ಡಾ. ಜಿ. ಶಂಕರ್, ಎಂ.ಆರ್.ಜಿ ಗ್ರೂಪ್ ಆಡಳಿತ ನಿರ್ದೇಶಕರಾದ ಡಾ. ಕೆ.ಪ್ರಕಾಶ್ ಶೆಟ್ಟಿ ಹಾಗೂ ಅಧ್ಯಕ್ಷರಾದ ಕೆ. ಉದಯಕುಮಾರ್ ಶೆಟ್ಟಿ ಅವರೊಂದಿಗೆ ಉದ್ಘಾಟಿಸಿದರು.

ಕಿನ್ನಿಮೂಲ್ಕಿಯ ಶ್ರೀ ವೀರಭದ್ರ ಕಲಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಬಿ.ಎಲ್. ಸಂತೋಷ್ ಅವರು, ಕರಾವಳಿ ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಇದೆ. ಹಲವು ಬ್ಯಾಂಕುಗಳು ಜನ್ಮತಾಳಿದ ಈ ಮಣ್ಣಿನಲ್ಲಿ ವಿಶ್ವಾಸಾರ್ಹತೆ ಮತ್ತು ಜನರ ಸೇವಾ ಮನೋಭವ ಬ್ಯಾಂಕಿಂಗ್ ಕ್ಷೇತ್ರದ ಪ್ರಗತಿಗೆ ಇಂಧನ ಎಂದರು. ಯಾವುದೇ ಕುಟುಂಬದ ನಿಯಂತ್ರಣ ಇಲ್ಲದ ಸಹಕಾರಿ ಸಂಘಗಳು ಶತಮಾನೋತ್ಸವ ಆಚರಿಸುತ್ತಿರುವುದು ಕರಾವಳಿಯ ಬ್ಯಾಂಕಿಂಗ್ ಸುಸ್ಥಿರತೆಗೆ ಹಿಡಿದ ಕನ್ನಡಿಯಾಗಿದೆ. ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆಯ ಈ ಸೊಸೈಟಿಯ ಶಾಖೆಗಳು ಎಲ್ಲೆಡೆ ವಿಸ್ತರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಶ್ಯಾಮಿಲಿ ಸಮೂಹದ ಸಂಸ್ಥಾಪಕ ಡಾ. ಜಿ. ಶಂಕರ್ ಮಾತನಾಡುತ್ತಾ, ಸಣ್ಣ ಹಣಕಾಸು ಸಂಸ್ಥೆಗಳಿಗೆ ಅನುಕೂಲವಾಗುವಂತಹ ಕಾನೂನುಗಳನ್ನು ಜಾರಿಗೆ ತರಲು ಸಲಹೆಗಳನ್ನು ನೀಡಬೇಕೆಂದು ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿ ಸೊಸೈಟಿ ಉನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದರು.

ಎಂ.ಆರ್.ಜಿ ಗ್ರೂಪ್ ಆಡಳಿತ ನಿರ್ದೇಶಕರಾದ ಡಾ. ಕೆ.ಪ್ರಕಾಶ್ ಶೆಟ್ಟಿ ತಾನು ನಡೆದ ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲುತ್ತಾ ದೇಶಪ್ರೇಮ ಬೆಳೆಸಿಕೊಂಡರೆ ಯಾವುದೇ ಉದ್ಯಮವಿರಲಿ ಅದು ಉತ್ತುಂಗದ ಸ್ಥಾನ ಪಡೆಯುತ್ತದೆ.

ಬುಡಕಟ್ಟು ಸಮಾಜದ ಮಹಿಳೆಯೋರ್ವರು ರಾಷ್ಟ್ರಪತಿ ಮತ್ತು ಸಾಮಾನ್ಯ ಕುಟುಂಬದಿಂದ ಯಾವುದೇ ರಾಜಕೀಯ ಇತಿಹಾಸ ಇಲ್ಲದ ಕುಟುಂಬದಿಂದ ಬಂದ ಹುಡುಗ ಪ್ರಧಾನಿಯಾಗಿದ್ದು ನಮ್ಮ ದೇಶದ ಪ್ರಜಾಪ್ರಭುತ್ವದ ಸೌಂದರ್ಯ ಎಂದರು.

ಸೊಸೈಟಿಯು ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು. ಶಾಸಕ ಯಶ್ಪಾಲ್ ಸುವರ್ಣ ಮಾತನಾಡುತ್ತಾ ಶುಭ ಹಾರೈಸಿದರು. ಸೊಸೈಟಿ ಅಧ್ಯಕ್ಷರಾದ ಕಿದಿಯೂರು ಉದಯಕುಮಾರ್ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹತ್ತು ಜನರ ಮನೆಯಲ್ಲಿ ದೀಪ ಬೆಳಗಿಸಬೇಕು ಎಂಬ ಉದ್ದೇಶ ಸಣ್ಣದಿಂದಲೇ ಇತ್ತು. ಸೊಸೈಟಿಯ ಲಾಭಾಂಶದಲ್ಲಿ ಮತ್ತಷ್ಟು ಸಮಾಜಸೇವೆ ಮಾಡಬೇಕೆಂಬ ಮಹದಾಸೆಯಿಂದ ಸಹಕಾರ ಕ್ಷೇತ್ರಕ್ಕೆ ಬಂದಿದ್ದೇವೆ, ಎಲ್ಲರೂ ಸಹಕರಿಸಬೇಕು ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ, ಡಾ. ಭರತ್ ಶೆಟ್ಟಿ, ಸಹಕಾರಿ ಧುರೀಣ ಟಿ. ಶಂಭು ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸದ್ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಟೌನ್ ಕೋಆಪ್ ಬ್ಯಾಂಕ್ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ, ಆಸ್ಟೆನ್ ಇನ್ಪ್ರಾ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ಶಾಂತಾ ಇಲೆಕ್ಟ್ರಿಕಲ್ಸ್ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಉಚ್ಚಿಲ, ಸೊಸೈಟಿ ಉಪಾಧ್ಯಕ್ಷೆ ಪ್ರಣೀತ ಶರದ್ ಶೆಟ್ಟಿ, ಸಿಇಒ ಹರ್ಷಿತಾ, ನಿರ್ದೇಶಕರಾದ ಜಗದೀಶ್ ಶೆಟ್ಟಿ ಕೀಳಂಜೆ, ನಿತಿನ್ ಪೂಜಾರಿ ಗುಂಡಿಬೈಲು, ಸುಧಾಕರ ಶೆಟ್ಟಿ, ಕೆ. ಉಮೇಶ್ ನಾಯರಿ, ಪ್ರಗತಿ ಯು. ಶೆಟ್ಟಿ, ರೇಖಾ ಪಿ ಆಚಾರ್ಯ, ಕೆ. ರಾಮರಾಜ್, ಸಂಜೀವ, ಸಂಜಯ್ ಉಪಸ್ಥಿತರಿದ್ದರು. ಯಕ್ಷ-ಗಾನ-ನಾದ ವೈಕುಂಠ ನಡೆಯಿತು. ಗುರುಪ್ರಸಾದ್ ಬೋಳಿಜಂಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ಸುಧಾ ಯಾದವ್ ಕರ್ನಾಟಕದ ನೂತನ ರಾಜ್ಯಪಾಲೆ

ಬೆಂಗಳೂರು, ಅ.12: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್...

ಅಮೇರಿಕನ್ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಇ. ಹಾಲ್ ಮತ್ತು ಮೈಕೆಲ್ ವುಡ್‌ಫೋರ್ಡ್ ಅವರಿಗೆ 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.12: 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೇರಿಕನ್ ಅರ್ಥಶಾಸ್ತ್ರಜ್ಞರಾದ...

ಅ.17-18: ಬ್ರಹ್ಮಾವರದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ

ಉಡುಪಿ, ಅ.12: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...

ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

ಕಾರ್ಕಳ, ಅ.12: ಮೊಬೈಲ್ ಸಂದೇಶಗಳ ಭರಾಟೆಯಲ್ಲಿ ಪತ್ರದ ಮಧುರತೆಯನ್ನು ಮರೆತಿರುವ ಇಂದಿನ...
error: Content is protected !!