ಕುಂದಾಪುರ, ಜು.1: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿಭಾಗದ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆ ಭಾಗವಾಗಿ ವಿದ್ಯಾರ್ಥಿಗಳು ಕೋಣಿಯ ಮಾನಸ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದರು. ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಆಟೋಟಗಳನ್ನು ವಿದ್ಯಾರ್ಥಿಗಳು ನಡೆಸಿದರು. ವಿಶೇಷ ಚೇತನ ವಿದ್ಯಾರ್ಥಿಗಳು ತಮ್ಮ ವಿವಿಧ ಪ್ರತಿಭೆಯನ್ನು ತೋರ್ಪಡಿಸಿದರು. ಕೋಣಿಯ ಮಾನಸ ಜ್ಯೋತಿ ಟ್ರಸ್ಟ್ ಕೃಷ್ಣ ಶೋಭಾ ಮಧ್ಯಸ್ಥ, ಚೇತನ ಹಾಗೂ ಸಂಸ್ಥೆಯ ಮತ್ತಿತರ ಸಿಬ್ಬಂದಿಗಳು, ಕಾಲೇಜಿನ ಡೀನ್ ಅಕಾಡೆಮಿಕ್ ಗಿರಿರಾಜ್ ಭಟ್ ನೆಂಪು, ಸಹಾಯಕ ಪ್ರಾಧ್ಯಾಪಕ ಮಹೇಶ್ ಪೂಜಾರಿ, ಕಂಪ್ಯೂಟರ್ ಪ್ರೋಗ್ರಾಮರ್ ಆಕಾಶ್ ಭಂಡಾರಿ, ಮಂಜುನಾಥ್ ಕುಲಾಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿ. ಬಿ. ಹೆಗ್ಡೆ ಕಾಲೇಜು: ಕೋಣಿ ಮಾನಸ ಜ್ಯೋತಿ ಶಾಲೆಗೆ ಬಿಸಿಎ ವಿದ್ಯಾರ್ಥಿಗಳ ಭೇಟಿ
ಬಿ. ಬಿ. ಹೆಗ್ಡೆ ಕಾಲೇಜು: ಕೋಣಿ ಮಾನಸ ಜ್ಯೋತಿ ಶಾಲೆಗೆ ಬಿಸಿಎ ವಿದ್ಯಾರ್ಥಿಗಳ ಭೇಟಿ
Date:




By
ForthFocus™