Thursday, September 24, 2026
Thursday, September 24, 2026

ಕೋಟ: ಎಐ ತರಬೇತಿ ಕಾರ್ಯಾಗಾರ

ಕೋಟ: ಎಐ ತರಬೇತಿ ಕಾರ್ಯಾಗಾರ

Date:

ಕೋಟ, ಜೂ.21: ಜ್ಞಾನಕ್ಕೆ ಕೊನೆಯೆಂಬುದಿಲ್ಲ ಶಿಕ್ಷಕರಾದವರು ಜ್ಞಾನದ ಹರವುಗಳನ್ನು ಸದಾ ವಿಸ್ತರಿಸಿಕೊಳ್ಳಬೇಕು. ಆ ದಿಸೆಯಲ್ಲಿ ನಾವೀನ್ಯ ರೂಪದ ಶಿಕ್ಷಣವನ್ನು ಪಡೆಯಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಈ ದೃಷ್ಠಿಯಿಂದ ಎಐ ಇವತ್ತಿನ ಬಹು ಚರ್ಚೆಯ ವಿಷಯವಾಗಿದ್ದು ಆ ಕುರಿತು ನಾವು ಅದನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಾಂಸ್ಕೃತಿಕ ಚಿಂತಕರಾದ ಇಬ್ರಾಹಿಂ ಸಾಹೇಬ್‌ ತಿಳಿಸಿದರು.

ಅವರು ಕಾರಂತ ಪ್ರತಿಷ್ಠಾನ ಕೋಟತಟ್ಟು ಗ್ರಾಮ ಪಂಚಾಯತ್‌, ನೆನಪು ಮೂವೀಸ್‌ ಮತ್ತು ಉಸಿರು ಕೋಟ ಆಶ್ರಯದಲ್ಲಿ ನಡೆದ ಎಐ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅಭ್ಯಾಗತರಾಗಿ ತರಬೇತುದಾರರಾದ ಮನೋಜ್‌ ಕಡಬ, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದು ನಲ್ನುಡಿಯ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿರುವ ವೀಣಾ ಸುರೇಶ್‌ ಎಐ ಕೃತಕ ಬುದ್ಧಿಮತ್ತೆಯ ಆಳ ಅಗತ್ಯತೆ ಅದನ್ನು ಅರಿಯುವ ವಿಚಾರ ಮತ್ತು ಅದರಲ್ಲಿರುವ ಹೊಸ ಸಾಧ್ಯತೆಗಳ ಬಗ್ಗೆ ಇಡೀ ದಿನ ತರಬೇತಿಯನ್ನು ನೀಡಿದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶೈಲಜಾ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!