Monday, June 22, 2026
Monday, June 22, 2026

ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಸಂಸ್ಥೆಗಳಿಗೆ ಕ್ರಿಯೇಟಿವ್‌ನ 26 ವಿದ್ಯಾರ್ಥಿಗಳ ಆಯ್ಕೆ

ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಸಂಸ್ಥೆಗಳಿಗೆ ಕ್ರಿಯೇಟಿವ್‌ನ 26 ವಿದ್ಯಾರ್ಥಿಗಳ ಆಯ್ಕೆ

Date:

ಕಾರ್ಕಳ, ಜೂ.21: 2026-27ನೇ ಸಾಲಿನ JOSAA ಕೌನ್ಸೆಲಿಂಗ್‌ನ ಮೊದಲ ಸುತ್ತಿನ ಸೀಟ್ ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 26 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಲ್ಲಿ 4 ವಿದ್ಯಾರ್ಥಿಗಳು ಐ.ಐ.ಟಿ, 9 ವಿದ್ಯಾರ್ಥಿಗಳು ಎನ್.ಐ.ಟಿ ಹಾಗೂ 13 ವಿದ್ಯಾರ್ಥಿಗಳು ಐ.ಐ.ಐ.ಟಿ ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ.

ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ನಾಗದೇವ್ ಎಂ.ಜಿ. – ಐ.ಐ.ಟಿ ಗುವಾಹಟಿ, ನಮಿತ್ ಕೆ. ಹೆಗಡೆ – ಐ.ಐ.ಟಿ ಹೈದರಾಬಾದ್, ಪ್ರಥಮ್ ತಮ್ಮನಗೌಡರ್ – ಐ.ಐ.ಟಿ ಗಾಂಧಿನಗರ, ರಶ್ಮಿ ಆರ್.ಎಚ್. – ಐ.ಐ.ಟಿ ಭುವನೇಶ್ವರ್

ಎನ್.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ತೇಜಸ್ ಆರ್.ಬಿ. – ಎನ್.ಐ.ಟಿ.ಕೆ ಸುರತ್ಕಲ್, ತೇಜಸ್ ಹೆಗಡೆ – ಎನ್.ಐ.ಟಿ.ಕೆ ಸುರತ್ಕಲ್, ದಿಶಾಂತ್ ಎಂ. – ಎನ್.ಐ.ಟಿ.ಕೆ ಸುರತ್ಕಲ್, ಮನೋಜ್ ಎಸ್. – ಎನ್.ಐ.ಟಿ ಪಾಟ್ನಾ, ಅಕ್ಷತ್ ಆರ್. ಹೆಗಡೆ – ಎನ್.ಐ.ಟಿ ಭೋಪಾಲ್, ಅನಿರುದ್ಧ್ ಉಪಾಧ್ಯಾಯ – ಎನ್.ಐ.ಟಿ ಭೋಪಾಲ್, ಬಸವರಡ್ಡಿ – ಎನ್.ಐ.ಟಿ ಗೋವಾ, ಅಕ್ಷತಾ ಎಂ. ಹೆಗಡೆ – ಎನ್.ಐ.ಟಿ ಆಂಧ್ರ ಪ್ರದೇಶ, ಧ್ರುವ ವಿ.ಬಿ. – ಎನ್.ಐ.ಟಿ ಅರುಣಾಚಲ ಪ್ರದೇಶ

ಐ.ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ಧನುಷ್ ಹೆಚ್.ಎ. – ಐ.ಐ.ಐ.ಟಿ ಜಬಲ್‌ಪುರ್, ಸಂವಿತ್ ಅಮಿತ್ ಗೋಕರ್ಣ – ಐ.ಐ.ಐ.ಟಿ ಗುವಾಹಟಿ, ಧೃಶ್ – ಐ.ಐ.ಐ.ಟಿ ಗುವಾಹಟಿ, ಹೃತಿಕ್ ಮಹೇಶ್ – ಐ.ಐ.ಐ.ಟಿ ಗುವಾಹಟಿ, ನಿನಾದ್ ಆರ್. ನಾಯ್ಕ್ – ಐ.ಐ.ಐ.ಟಿ ಪುಣೆ, ಸುಕ್ಷೀತ್ ಜಿ. ಗೌಡ – ಐ.ಐ.ಐ.ಟಿ ಸುರತ್, ಸಿಂಚನ ಎಸ್. ಭಟ್ – ಐ.ಐ.ಐ.ಟಿ ಕೊಟ್ಟಾಯಂ, ಪ್ರಜ್ವಲ್ ಭಟ್ – ಐ.ಐ.ಐ.ಟಿ ಧಾರವಾಡ, ಪ್ರಜ್ಞಾಲೋಚನ ಬಿ.ಆರ್. – ಐ.ಐ.ಐ.ಟಿ ಧಾರವಾಡ, ಪ್ರೀತಮ್ ಎನ್.ಬಿ. – ಐ.ಐ.ಐ.ಟಿ ಬಗಲ್‌ಪುರ್, ನಯನಾ ಡಿ. ಗೊಂಡ – ಐ.ಐ.ಐ.ಟಿ ತಿರುಚಿರಾಪಳ್ಳಿ

ಇದಲ್ಲದೆ, ಕುಶಾಲ್ ಎಲ್. ಅವರು ಎಸ್.ಪಿ.ಎ ಭೋಪಾಲ್ ಹಾಗೂ ತನ್ಮಯ್ ಆರ್. ಜಾದವ್ ಅವರು ಎಸ್.ಪಿ.ಎ ವಿಜಯವಾಡಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಗೆ ಪಾತ್ರರಾದ ಎಲ್ಲಾ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ತಡೆಯಲು ಪ್ರಾಥಮಿಕ ಶಾಲೆಗಳಲ್ಲಿ ಎಐ ಬಳಕೆ ನಿಷೇಧ

ಯು.ಬಿ.ಎನ್.ಡಿ., ಜೂ.21: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಉತ್ಪಾದಕ ಎಐ ಪರಿಕರಗಳನನ್ನು ಬಳಸದಂತೆ...

ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ- ಏಳು ಸಾವು

ಪೆರಿಯಪಾಳಯಂ, ಜೂಲ್.21: ತಮಿಳುನಾಡಿನ ಪೆರಿಯಪಾಳಯಂನಲ್ಲಿರುವ ಸಮುದ್ರಾಹಾರ ರಫ್ತು ಕಂಪನಿಯಲ್ಲಿ ಸಂಭವಿಸಿದ ಅಮೋನಿಯಾ...

ಬಾರಿಕೆರೆ: ಹಸಿರು ಹೆಜ್ಜೆ ಕಾರ್ಯಕ್ರಮ

ಕೋಟ, ಜೂ.21: ಪಂಚವರ್ಣ ಸಂಘಟನೆ ಆರಂಭದಲ್ಲಿ ಕೈಗೊಂಡ ಪರಿಸರದ ಕಾರ್ಯ ನಿತ್ಯ...

ಬಿಗಿ ಭದ್ರತೆಯ ನಡುವೆ ನಡೆದ NEET-UG 2026 ಮರುಪರೀಕ್ಷೆ; ಪರೀಕ್ಷೆ ಬರೆದ 20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು

ನವದೆಹಲಿ, ಜೂ.21: ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ...
error: Content is protected !!