Sunday, June 7, 2026
Sunday, June 7, 2026

ಮಣಿಪಾಲ: ಪ್ರಥಮ ಚಿಕಿತ್ಸೆ, ಸಿಪಿಆರ್ ತರಬೇತಿ

ಮಣಿಪಾಲ: ಪ್ರಥಮ ಚಿಕಿತ್ಸೆ, ಸಿಪಿಆರ್ ತರಬೇತಿ

Date:

ಮಣಿಪಾಲ, ಜೂ.7: ಮಣಿಪಾಲದ ಎಂಐಟಿ ಗ್ರಂಥಾಲಯದಲ್ಲಿ ನಡೆದ ಯುವ ಆಪ್ತ ಮಿತ್ರ ತರಬೇತಿ ಶಿಬಿರದ ಎನ್‌ಸಿಸಿ ಕೆಡೆಟ್‌ಗಳಿಗಾಗಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ (ಎಂಸಿಎಚ್‌ಪಿ) ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗದ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್ (ಸಿಪಿಆರ್) ತರಬೇತಿ ಶಿಬಿರ ಆಯೋಜಿಸಲಾಯಿತು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 250 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದರು. ಕಾರ್ಯಕ್ರಮಕ್ಕೆ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಮಾರ್ಗದರ್ಶನ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ದಿವ್ಯಾ ಅರವಿಂದ ಪ್ರಭು, ಡಾ. ಅಖಿಲಾ ಡಿ., ಡಾ. ಯಶ್ ಆಲೋಕ್, ಡಾ. ತೇಜಸ್ ಅಥೇಯ ಡಾ. ತೈಸೀರ್ ಅಹ್ಮದ್ ಹಾಗೂ ಎಂಸಿಎಚ್‌ಪಿ ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗದ ಕ್ಲಿನಿಕಲ್ ಸೂಪರ್‌ವೈಸರ್‌ II ಅರುಂಧತಿ ಹೆಬ್ಬಾರ್ ಭಾಗವಹಿಸಿದರು ಹಾಗೂ ಅವರ ತಂಡದ ಸರ್ವಾಣನ್ ಮತ್ತು ಲಾಲಿತ್ಯಾ ತರಬೇತಿ ನೀಡಿದರು.

ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯ ಮಹತ್ವ, ಆಹಾರ ಸೇವಿಸುವಾಗ ನಡುವಿನಲ್ಲಿ ಸಿಕ್ಕಾಗ ಉಸಿರಾಟದ ಸಮಸ್ಯೆಗೆ ತುರ್ತು ಪ್ರಥಮ ಚಿಕಿತ್ಸೆ ವಿಧಾನ, ಪ್ರಜ್ಞಾಹೀನ ರೋಗಿಗಳಿಗೆ ಚೇತರಿಕೆ ಗೊಳ್ಳಲು, ಮೂರ್ಛೆ ನಿರ್ವಹಣೆ, ಲಭ್ಯವಿರುವ ಸರಳ ವಸ್ತುಗಳನ್ನು ಬಳಸಿಕೊಂಡು ಮುರಿದ ಎಲುಬು ಅಥವಾ ಗಾಯಗೊಂಡ ಭಾಗವನ್ನು ಚಲಿಸದಂತೆ ಸ್ಥಿರಗೊಳಿಸುವ ಕುರಿತು, ಹಾವು ಕಡಿತಕ್ಕೊಳಗಾದವರಿಗೆ ಸೂಕ್ತವಾದ ತುರ್ತು ಚಿಕಿತ್ಸೆಯ ಬಗ್ಗೆ ಹಾಗೂ ಸಿಪಿಆರ್ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ತರಬೇತಿಯಲ್ಲಿ ಭಾಗವಹಿಸಿದ ಕೆಡೆಟ್‌ಗಳು ತುರ್ತು ಪರಿಸ್ಥಿತಿಗಳಲ್ಲಿ ಜೀವ ರಕ್ಷಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಸರಿಸುವ ಕುರಿತು ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಂಡರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ. ಏರಿಕೆ

ನವದೆಹಲಿ, ಜೂ.7: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ....

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ: ರಮೇಶ್ ಕಾಂಚನ್

ಉಡುಪಿ, ಜೂ.7: ಪ್ರತಿದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯ ಮೂಲಕ...

ಅಂತರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ಜಿಲ್ಲೆಯ ತೆಂಕನಿಡಿಯೂರಿನ ಸುರೇಶ್ ಅವರಿಗೆ ಅವಳಿ ಚಿನ್ನದ ಪದಕ

ಉಡುಪಿ, ಜೂ.7: ಸಂಯುಕ್ತ ಭಾರತೀಯ ಕೇಲ್ ಫೌಂಡೇಷನ್ ವತಿಯಿಂದ ಆಯೋಜಿಸಿದ 14ನೇ...
error: Content is protected !!