Friday, September 25, 2026
Friday, September 25, 2026

ರಾಜೇಂದ್ರ ಪೂಜಾರಿ ಅವರಿಗೆ ಡಾ. ಆರ್.ಎಂ ಹಡಪದ್ ರಾಷ್ಟ್ರೀಯ ಪ್ರಶಸ್ತಿ

ರಾಜೇಂದ್ರ ಪೂಜಾರಿ ಅವರಿಗೆ ಡಾ. ಆರ್.ಎಂ ಹಡಪದ್ ರಾಷ್ಟ್ರೀಯ ಪ್ರಶಸ್ತಿ

Date:

ಉಡುಪಿ, ಮೇ 31: ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ ಬಾಗಲಕೋಟೆ ಇವರು ಆಯೋಜಿಸಿದ, ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ ಬೆಂಗಳೂರು 2026 ರ ಅಂಗವಾಗಿ ಡಾ. ಆರ್.ಎಂ ಹಡಪದ್ ರಾಷ್ಟ್ರೀಯ ಪ್ರಶಸ್ತಿ ಕುಂದಾಪುರ ತಾಲೂಕಿನ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಸಿದ್ದಾಪುರ ಇಲ್ಲಿನ ಚಿತ್ರಕಲಾ ಶಿಕ್ಷಕ ರಾಜೇಂದ್ರ ಪೂಜಾರಿ ತ್ರಾಸಿಯವರಿಗೆ ಲಭಿಸಿದೆ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥರಾದ ಡಾ . ಮೋಹನ್ ರಾವ್ ಪಾಂಚಾಲ, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಸ್. ಸಿ ಪಾಟೀಲ್ ಹಾಗೂ ವಿಶ್ರಾಂತ ವಿಶೇಷಾಧಿಕಾರಿಗಳು ಕರ್ನಾಟಕ ಲಲಿತ ಕಲಾ ವಿಶ್ವವಿದ್ಯಾಲಯ ಬಾದಾಮಿ, ಇಳಕಲ್ ವಿಜಯ್ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಸವರಾಜ್ ಗವಿಮಠ ಹಾಗೂ ರಮೇಶ್ ಕಮತಗಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ ಬಾಗಲಕೋಟೆ, ಸಾಹಿತಿ ಎಂವಿ ಷಡಕ್ಷರಿ ಹಾಗೂ ಮುಂತಾದವರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಒಟ್ಟು 19 ಮಂದಿ ಸಾಧಕರನ್ನು ಈ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...

ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ- ವಿಶೇಷ ಉಪನ್ಯಾಸ

ಕುಂದಾಪುರ, ಸೆ.24: ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಉಡುಪಿಯ ಹಲವೆಡೆ ದಿನವಿಡೀ ಉತ್ತಮ ಮಳೆ

ಉಡುಪಿ, ಸೆ.24: ಉಡುಪಿಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಕಾರ್ಕಳ, ಮಣಿಪಾಲ,...
error: Content is protected !!