Sunday, October 18, 2026
Sunday, October 18, 2026

ಅಧಿವಕ್ತ ಪರಿಷತ್‌ ವತಿಯಿಂದ ನ್ಯಾಯಧೀಶರಾಗಿ ಆಯ್ಕೆಯಾದವರಿಗೆ ಅಭಿನಂದನ ಕಾರ್ಯಕ್ರಮ

ಅಧಿವಕ್ತ ಪರಿಷತ್‌ ವತಿಯಿಂದ ನ್ಯಾಯಧೀಶರಾಗಿ ಆಯ್ಕೆಯಾದವರಿಗೆ ಅಭಿನಂದನ ಕಾರ್ಯಕ್ರಮ

Date:

ಉಡುಪಿ, ಮೇ 31: ಉಡುಪಿ ಜಿಲ್ಲಾ ವಕೀಲರ ಸಂಘದಿಂದ ಜೆ.ಎಮ್.ಎಫ್.ಸಿ ನ್ಯಾಯಧೀಶರಾಗಿ ಆಯ್ಕೆಯಾದ ಸುಕೇಂದ್ರ ಇವರಿಗೆ ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್‌ ವತಿಯಿಂದ ಅಭಿನಂದಿಸಲಾಯಿತು. ಇವರು ಉಡುಪಿ ನ್ಯಾಯಾಲಯದಲ್ಲಿ ಯುವ ನ್ಯಾಯವಾದಿಯಾಗಿ ವೃತ್ತಿ ಮಾಡುತ್ತಿದ್ದು ಇದೀಗ ಉಡುಪಿ ಜಿಲ್ಲೆಯಲ್ಲಿಯೇ ಆಯ್ಕೆಯಾದ ಏಕೈಕ ನ್ಯಾಯದೀಶರಾಗಿರುತ್ತಾರೆ. ಅಧಿವಕ್ತ ಪರಿಷತ್‌ ಜಿಲ್ಲಾ ವತಿಯಿಂದ ಇವರಿಗೆ ಸನ್ಮಾನಿಸಿ ಅಭಿನಂದಿಸಿದ್ದು, ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್‌ ಅಧ್ಯಕ್ಷರಾದ ಸಂತೋಷ್‌ ಹೆಬ್ಬಾರ್‌ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ಉಡುಪಿ ವಕೀಲರ ಸಂಘದ ಮಾಜಿ ಕಾರ್ಯದರ್ಶಿಯಾದ ರಾಜೇಶ್‌ ಎ.ಆರ್‌ ಅಭಿನಂದನ ಮಾತುಗಳನ್ನಾಡಿದರು. ವಕೀಲರ ಸಂಘದ ಮಾಜಿ ಸಾಂಸ್ಕತಿಕ ಕಾರ್ಯದರ್ಶಿ ಸಂತೋಷ್‌ ಕುಮಾರ್‌ ಮೂಡುಬೆಳ್ಳೆ ನಿರೂಪಿಸಿದರು. ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್‌ ಪ್ರಧಾನ ಕಾರ್ಯದರ್ಶಿಗಳಾದ ಆರೂರು ಸುಕೇಶ್‌ ಶೆಟ್ಟಿ ವಂದಿಸಿದರು.

ಅಧಿವಕ್ತ ಪರಿಷತ್‌ ಪದಾಧಿಕಾರಿಗಳಾದ ಹಾಗೂ ನ್ಯಾಯವಾದಿಗಳಾದ ಶಶೀಕಲಾ ತೋನ್ಸೆ, ಬ್ರಹ್ಮಾವರ ವಕೀಲರ ಸಂಘದ ಉಪಾಧ್ಯಕ್ಷರಾದ ಕರ್ಜೆ ಬಾಲಕ್ರಷ್ಣ ಶೆಟ್ಟಿ, ಉಡುಪಿ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್‌ ಎಸ್.ಪಿ ಏಳಿಂಜೆ, ವಕೀಲರ ಸಂಘದ ಮಾಜಿ ಜೊತೆ ಕಾರ್ಯದರ್ಶಿ ರವೀಂದ್ರ ಬೈಲೂರು, ನಾಗರಾಜ್ ಕಿನ್ನಿಮೂಲ್ಕಿ, ಆಶಿಶ್‌ ಶೆಟ್ಟಿ ಬೋಳ, ಸುಚಿತ ಶೆಟ್ಟಿ, ಕಾವ್ಯ ನಾಯ್ಕ್, ಮೇಘನಾ, ಸುಚೇತಾ ಶೆಟ್ಟಿ, ಜಯಂತ್‌ ರಾವ್‌, ಪೆಲಾತ್ತೂರು ರೋಹಿತ್‌ ಆಚಾರ್ಯ, ಶ್ರೀನಿಧಿ ಸುವರ್ಣ, ಪ್ರಸನ್ನ ಶೆಣೈ, ಲೀವನ್‌ ಪ್ಲಾ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!