Wednesday, May 13, 2026
Wednesday, May 13, 2026

ಶಿಕ್ಷಣ ಸಂಪದ ಸರಣಿ ಕಾರ್ಯಕ್ರಮ

ಶಿಕ್ಷಣ ಸಂಪದ ಸರಣಿ ಕಾರ್ಯಕ್ರಮ

Date:

ಕೋಟ, ಮೇ 7: ಇಂದು ಮಕ್ಕಳಿಗೆ ಮಾಹಿತಿಯ ಕೊರತೆ ಇದೆ. ಅವಕಾಶಗಳ ಸದ್ಭಳಕೆಯ ಮಾರ್ಗದರ್ಶನದ ಕೊರತೆ ಇದೆ ಆ ದೃಷ್ಠಿಯಿಂದ ಶೈಕ್ಷಣಿಕವಾಗಿ ಮಕ್ಕಳನ್ನು ಅಭಿವೃದ್ಧಿಪಡಿಸುವುದು ಬಲಯುತರಾಗಿ ಮಾಡುವುದು ಇಂದಿನ ಕಾಲದ ಬಹಳ ಮುಖ್ಯವಾದ ವಿಚಾರವಾಗಿದೆ. ಈ ದಿಸೆಯಲ್ಲಿ ಶೈಕ್ಷಣಿಕ ಹಲವುಗಳು ವಿಸ್ತಾರಗೊಳ್ಳಬೇಕು ಆ ಎಲ್ಲಾ ಹಿನ್ನೆಲೆಯಿಂದ ಶಿಕ್ಷಣ ಸಂಪದ ಕಾರ್ಯಕ್ರಮವನ್ನು ಆರಂಭಿಸುವ ಯೋಚನೆ ಮಾಡಿದ್ದು ಇದಕ್ಕೆ ಎಲ್ಲರ ಸಹಕಾರಬೇಕು ಎಂದು ಸಾಂಸ್ಕೃತಿಕ ಚಿಂತಕರಾದ ಇಬ್ರಾಹಿಂ ಸಾಹೇಬ್‌ ಹಂಗಾರಕಟ್ಟೆ ನುಡಿದರು.

ಅವರು ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ ಕಾರಂತ ಪ್ರತಿಷ್ಠಾನ ಕೋಟ ಕೋಟತಟ್ಟು ಗ್ರಾಮ ಪಂಚಾಯತ್‌ ಅರಿವು ಡಿಜಿಟಲ್‌ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಆಸರೆಯಲ್ಲಿ ನಡೆದ ಶಿಕ್ಷಣ ಸಂಪದ ಸರಣಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷರಾದ ಆನಂದ ಸಿ ಕುಂದರ್‌ ರವರು ಶೈಕ್ಷಣಿಕದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಅದರ ಸದ್ಭಳಕೆ ಇನ್ನು ಆಗಿಲ್ಲ. ಆ ದೃಷ್ಠಿಯಿಂದ ಶಿಕ್ಷಣ ಸಂಪದ ಕಾರ್ಯಕ್ರಮ ಬಹಳ ಶ್ಲಾಘನೀಯವಾದುದು ಹಾಗಾಗಿ ಇಬ್ರಾಹಿಂ ಸಾಹೇಬರು ಅಭಿನಂದನೆಗೆ ಅರ್ಹರು ಎಂದರು.

ವೇದಿಕೆಯಲ್ಲಿ ಸುಬ್ರಾಯ ಆಚಾರ್‌, ಶಿಬಿರದ ಮೇಲ್ವಿಚಾರಕರಾದ ಶಾರದಾ ಜೈನ್‌, ಶಿಬಿರದ ವಿವಿಧ ತಂಡಗಳ ನಾಯಕರು ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ನರೇಂದ್ರ ಕುಮಾರ್‌ ಕೋಟ ಸ್ವಾಗತಿಸಿ, ಸಂಪನ್ಮೂಲ ವಿದ್ಯಾರ್ಥಿ ಉನ್ನತಿ ಹಂದಟ್ಟು ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಉಡುಪಿ, ಮೇ 13: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಮೇ...

ಸಂಸ್ಕೃತಿಯ ಬೇರುಗಳ ಜೊತೆಗೆ ಬದುಕಿನ ಕಷ್ಟದ ಅರಿವನ್ನೂ ಮೂಡಿಸಬೇಕು: ಅಮರೇಶ್‌ ಹೆಗ್ಡೆ

ಹಿರಿಯಡಕ, ಮೇ 13: ಸಂಸ್ಕೃತಿಯ ತಾಯಿಬೇರುಗಳ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳದಂತೆ ಸಾಂಸ್ಕೃತಿಕ...
error: Content is protected !!