Monday, June 8, 2026
Monday, June 8, 2026

ಯಕ್ಷಕಲಾರಾಧನೆ ಅರ್ಥಪೂರ್ಣ: ಪ್ರದೀಪ್ ಕುಮಾರ್ ಕಲ್ಕೂರ

ಯಕ್ಷಕಲಾರಾಧನೆ ಅರ್ಥಪೂರ್ಣ: ಪ್ರದೀಪ್ ಕುಮಾರ್ ಕಲ್ಕೂರ

Date:

ಕೋಟ, ಏ.17: ಯುಗಾದಿ ಉತ್ಸವವನ್ನು ಕೇಂದ್ರೀಕರಿಸಿಕೊಂಡು ಯಕ್ಷಕಲಾರಾಧನೆ ಅರ್ಥಪೂರ್ಣ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು. ಬುಧವಾರ ಕಾರ್ಕಡ ಭೂಮಿಕ ಸಮೀಪ ಸೌರಮಾನ ಯುಗಾದಿ ಯಕ್ಷಗಾನ ಶೀರ್ಷಿಕೆಯಡಿ ಕೋಟ ಸಾಲಿಗ್ರಾಮ ಹದಿನಾಲ್ಕು ಗ್ರಾಮಗಳ ಯಕ್ಷಗಾನ ಕಲಾಭಿಮಾನಿಗಳ ನೇತೃತ್ವದಲ್ಲಿ ಶ್ರೀ ಅನಂತಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಕಲಾರಾಧಕರನ್ನು ಅಭಿನಂದಿಸಿ ಅವರು ಮಾತನಾಡಿದರು.

ಯಕ್ಷಾಭಿಮಾನಿಗಳಾದ ರಾಘವೇಂದ್ರ ಮಧ್ಯಸ್ಥ ಪಾರಂಪಳ್ಳಿ, ಆನಂದ್ ಆಚಾರ್, ಎಚ್ ನಾಗರಾಜ್ ಹಂದೆ, ಗಣೇಶ್ ಕಿಣಿ, ಶ್ರೀಕಾಂತ್ ಐತಾಳ್, ರಮೇಶ್ ಭಂಡಾರಿ, ಸಿ.ಸೂರ್ಯನಾರಾಣ ಮಯ್ಯ, ಕೆ.ನಾಗರಾಜ ಸೋಮಯಾಜಿ ಮುಂತಾದವರನ್ನು ಅಭಿನಂದಿಸಲಾಯಿತು. ಇಂದ್ರಪ್ರಸ್ಥ ಪ್ರಕಾಶ್ ಮಯ್ಯ ಹರ್ತಟ್ಟು ದಂಪತಿ, ಕೆ.ತಾರಾನಾಥ ಹೊಳ್ಳ ದಂಪತಿಗಳನ್ನು ಸನ್ಮಾನಿಸಲಾಯಿತು. ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್ ಸುಜಯೀಂದ್ರ ಹಂದೆ ಅಭಿನಂದನಾ ನುಡಿ ಗಳನ್ನಾಡಿದರು. ಮಾಧುರಿ ಶ್ರೀರಾಮ್ ನಿರೂಪಿಸಿದರು. ಯಕ್ಷಾರಾಧಕ ಎಚ್ ಜನಾರ್ದನ ಹಂದೆ ವಂದಿಸಿದರು. ನಂತರ ಚಂದ್ರಹಾಸ ಚರಿತ್ರೆ ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು. ಗೆಳೆಯರ ಬಳಗ ಕಾರ್ಕಡ, ಕರ್ನಾಟಕ ಯಕ್ಷಧಾಮ ಮಂಗಳೂರು ಸಹಕಾರ ನೀಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ. ಏರಿಕೆ

ನವದೆಹಲಿ, ಜೂ.7: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ....

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ: ರಮೇಶ್ ಕಾಂಚನ್

ಉಡುಪಿ, ಜೂ.7: ಪ್ರತಿದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯ ಮೂಲಕ...

ಅಂತರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ಜಿಲ್ಲೆಯ ತೆಂಕನಿಡಿಯೂರಿನ ಸುರೇಶ್ ಅವರಿಗೆ ಅವಳಿ ಚಿನ್ನದ ಪದಕ

ಉಡುಪಿ, ಜೂ.7: ಸಂಯುಕ್ತ ಭಾರತೀಯ ಕೇಲ್ ಫೌಂಡೇಷನ್ ವತಿಯಿಂದ ಆಯೋಜಿಸಿದ 14ನೇ...
error: Content is protected !!