ಉಡುಪಿ, ಜೂ.7: ಸಂಯುಕ್ತ ಭಾರತೀಯ ಕೇಲ್ ಫೌಂಡೇಷನ್ ವತಿಯಿಂದ ಆಯೋಜಿಸಿದ 14ನೇ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ 2026 ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕರ್ನಾಟಕ ತಂಡದ ಪರವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿ ಸೇವೆ ಸಲ್ಲಿಸುತಿರುವ ಸುರೇಶ್ ಇವರು ಭಾಗವಹಿಸಿ 10 ಕಿಮೀ ಪ್ರಥಮ 5 ಕಿಮೀ ಪ್ರಥಮ, 3 ಕಿಮೀ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ನೇಪಾಳ, ಬಾಂಗ್ಲಾದೇಶ, ಕತಾರ್, 9 ರಾಜ್ಯಗಳಾದ ತೆಲಂಗಾಣ. ತಮಿಳುನಾಡು. ಆಂಧ್ರಪ್ರದೇಶ. ಮುಂಬೈ, ಪಂಜಾಬ್ ಕರ್ನಾಟಕ ಇಲ್ಲಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಮುಂದೆ ನಡೆಯುವ ಅಂತರಾಷ್ಟ್ರೀಯ ಮಟ್ಟಕ್ಕೆ ಇವರು ಆಯ್ಕೆಯಾಗಿರುತ್ತಾರೆ.
ಅಂತರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ಜಿಲ್ಲೆಯ ತೆಂಕನಿಡಿಯೂರಿನ ಸುರೇಶ್ ಅವರಿಗೆ ಅವಳಿ ಚಿನ್ನದ ಪದಕ
ಅಂತರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ಜಿಲ್ಲೆಯ ತೆಂಕನಿಡಿಯೂರಿನ ಸುರೇಶ್ ಅವರಿಗೆ ಅವಳಿ ಚಿನ್ನದ ಪದಕ
Date:




By
ForthFocus™