ಬ್ರಹ್ಮಾವರ, ನ.3: ಅಧ್ಯಯನಕ್ಕೆ ಪೂರಕ ಶಕ್ತಿಯಾಗಿ ಕನ್ನಡ ಮಾಧ್ಯಮ ಸಮೃದ್ಧಿಯಾಗಬೇಕು ಎಂದು ಎಂಜಿಎಂ.ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನಲ್ಲಿ ಜರುಗಿದ ಕನ್ನಡ ರಾಜ್ಯೇೂತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಾತೃಭಾಷೆ ಕನ್ನಡ ಸಾಹಿತ್ಯವಾಗಿ ಸಾಕಷ್ಟು ಬೆಳೆದಿದೆ. ಆದರೆ ಶಾಲಾ ಕಾಲೇಜುಗಳಲ್ಲಿ ವಿಷಯ ಅಧ್ಯಯನಕ್ಕೆ ಸಂಬಂಧಿಸಿದ ಪಠ್ಯ ಪುಸ್ತಕಗಳು ಮತ್ತು ಆಕಾರ ಗ್ರಂಥಗಳ ಕೊರತೆ ಸಾಕಷ್ಟಿದೆ. ಬಹುಮುಖ್ಯವಾಗಿ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟ ಗ್ರಂಥ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ಅಧ್ಯಯನಕ್ಕೆ ಅನುಕೂಲಕರವಾದ ಆಕಾರ ಗ್ರಂಥಗಳು ಇನ್ನಷ್ಟು ಲಭ್ಯವಾಗಬೇಕಾಗಿದೆ. ಹಾಗಾಗಿಯೇ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿತ ಗ್ರಂಥಗಳ ಮೇಲೆ ಹೆಚ್ಚು ಅವಲಂಬಿಸಕಾದ ಅನಿವಾರ್ಯತೆ ಇದೆ.

ಕನ್ನಡ ಇಂಗ್ಲಿಷ್ ಮಾಧ್ಯಮಗಳು ನಮ್ಮ ವಿಷಯ ಜ್ಞಾನ ವಿಸ್ತರಿಸಲು ಸಹಕಾರಿಯಾಗಿ ನಿಲ್ಲುತ್ತದೆ ಅನ್ನುವುದಕ್ಕೆ ನಮ್ಮ ಅದೆಷ್ಟೋ ಕನ್ನಡದ ಖ್ಯಾತ ಸಾಹಿತ್ಯಗಳು ಉದಾಹರಣೆಯಾಗಿ ನಿಲ್ಲುತ್ತಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನಿದೇ೯ಶಕ ಪ್ರೊ.ಮ್ಯಾಥ್ಯೂ ನೈನಾನ್ ವಹಿಸಿದ್ದರು. ಉಪ ನಿರ್ದೇಶಕರಾದ ಲಾಲಿ ಅಬ್ರಹಾಮ್ ಮ್ಯಾಥ್ಯೂ, ಪ್ರಾಂಶುಪಾಲ ಡಾ. ಜಾನ್ ಥಾಮಸ್, ಜೆಸ್ಸಿ ಆ್ಯಂಡ್ರ್ವಿಸ್ ಉಪ ಪ್ರಾಂಶುಪಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಇತಿಹಾಸ ಪರಿಚಿಯಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.




By
ForthFocus™