Sunday, September 27, 2026
Sunday, September 27, 2026

ಸಮಾಜಕ್ಕೆ ಸತೀಶ್ ಪೂಜಾರಿ ಕೊಡುಗೆ ಅನನ್ಯ: ನಾಡೋಜ ಡಾ.ಜಿ ಶಂಕರ್

ಸಮಾಜಕ್ಕೆ ಸತೀಶ್ ಪೂಜಾರಿ ಕೊಡುಗೆ ಅನನ್ಯ: ನಾಡೋಜ ಡಾ.ಜಿ ಶಂಕರ್

Date:

ಕೋಟ, ನ.3: ಕಲಾವಿದನಾಗಿ, ವೈದ್ಯರಾಗಿ ಈ ಸಮಾಜಕ್ಕೆ ಡಾ.ಸತೀಶ್ ಪೂಜಾರಿ ಸೇವೆ ಅನನ್ಯ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು. ನ.೨ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಪಡುಕರೆಯಲ್ಲಿ ದಿ. ಡಾ.ಸತೀಶ್ ಪೂಜಾರಿ ಅವರ ಸ್ಮರಣಾರ್ಥ ಮನಸ್ಮಿತ ಫೌಂಡೇಶನ್, ಕೋಟ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ, ಕರೋಕೆ ಗಾಯನ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದರು.

ಗೀತಾನಂದ ಟ್ರಸ್ಟ್ ನ ಪ್ರವರ್ತಕ ಆನಂದ ಸಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಲೆಕ್ಕ ಪರಿಶೋಧಕ ಪದ್ಮನಾಭ ಕಾಂಚನ್ ದಿ| ಡಾ| ಸತೀಶ್ ಪೂಜಾರಿ ಅವರ ಸಂಸ್ಮರಣೆಯನ್ನು ನಡೆಸಿದರು. ಮುಖ್ಯ ಅಭ್ಯಾಗತರಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಸೆಂಟರ್ ಕುಂದಾಪುರ ಅಧ್ಯಕ್ಷ ಎಸ್ ಜಯಕರ್ ಶೆಟ್ಟಿ, ಮನಸ್ಮಿತ ಫೌಂಡೇಶನ್ ನಿರ್ದೇಶಕರಾದ ಸವಿತಾ ಪ್ರಕಾಶ್ ತೋಳಾರ್, ನೇಹಾ ಸತೀಶ್ ಪೂಜಾರಿ ಉಪಸ್ಥಿತರಿದ್ದರು. ಕರೋಕೆ ಸ್ಪರ್ಧೆಯಲ್ಲಿ ರಾಜ್ಯದ ವಿವಿದೆಡೆಗಳಿಂದ ಭಾಗವಹಿಸಿದ್ದು ಪ್ರಥಮ ಬಹುಮಾನವನ್ನು ಎಚ್ ಜಿ ಮೋಹನ್ ಸಾಗರ, ದ್ವಿತೀಯ ಚಂದನ ಸಿ ಎನ್ ಭದ್ರಾವತಿ, ತೃತೀಯ ಬಹುಮಾನ ಸುಕೇಶ್ ಎಣ್ಣೆಹೊಳೆ ಕಾರ್ಕಳ ಇವರುಗಳಿಗೆ ನಗದು ಸಹಿತ ಫಲಕವನ್ನು ನೀಡಲಾಯಿತು.

ಕಾರ್ಯಕ್ರಮ ಸಂಯೋಜಕರಾದ ಶ್ರೀಮಾತಾ ಆಸ್ಪತ್ರೆಯ ನಿರ್ದೇಶಕ ಡಾ| ಪ್ರಕಾಶ್ ತೋಳಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ ಜೆ ಪ್ರಸನ್ನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಬ್ರಹ್ಮಾವರ, ಕೋಟದ ಪಂಚವರ್ಣ ಸಂಘಟನೆ, ಜೈಹಿಂದ್ ಕ್ರಿಕೆಟರ್ಸ್ ಪಡುಕರೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ರಹ್ಮಾವರ, ಟ್ರಾವೆಲಿಂಕ್ಸ್ ಫ್ರೆಂಡ್ಸ್ ಕೋಟ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಕರೆ, ನನ್ನ ಹಾಡು ನನ್ನದು ಕುಂದಾಪುರ, ವಿ.೯ ಫ್ರೆಂಡ್ಸ್ ಬ್ರಹ್ಮಾವರ, ವಾಹಿನಿ ಯುವಕ ಮಂಡಲ ಪಡುಕರೆ ಸಹಕಾರ ನೀಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!