Saturday, November 14, 2026
Saturday, November 14, 2026

ಹಿಂದೂ ಸಮಾಜ ಕಟ್ಟಲು ಅಷ್ಟ ಮಠದ ಸ್ವಾಮೀಜಿಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ: ಶಾಸಕ ಯಶಪಾಲ್ ಸುವರ್ಣ

ಹಿಂದೂ ಸಮಾಜ ಕಟ್ಟಲು ಅಷ್ಟ ಮಠದ ಸ್ವಾಮೀಜಿಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ: ಶಾಸಕ ಯಶಪಾಲ್ ಸುವರ್ಣ

Date:

ಬ್ರಹ್ಮಾವರ, ಅ.12: ಭಾವಿ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಪರ್ಯಾಯ ಪೂರ್ವಭಾವಿ ತಯಾರಿಗಳ ಬಗ್ಗೆ ಬ್ರಹ್ಮಾವರ ವಲಯದ ಸಭೆ ಶನಿವಾರ ಬ್ರಹ್ಮಾವರ ಉನ್ನತಿ ಸಭಾಂಗಣದಲ್ಲಿ ನಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿ ಮಠದ ಸ್ವಾಮೀಜಿಗಳು ಕೃಷ್ಣನ ಪೂಜೆಯಲ್ಲದೆ ಹಿಂದೂ ಸಮಾಜ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಶಿರೂರು ಮಠ ಹಿಂದಿನಿಂದಲು ಹಿಂದೂ ಸಮಾಜ ಕಟ್ಟಲು ಶ್ರಮಿಸಿದ್ದಾರೆ, ಆದ್ದರಿಂದ ಶಿರೂರು ಮಠದ ಪರ್ಯಾಯ ಉಡುಪಿಯ ಜನತೆಯ ಪರ್ಯಾಯ ಆಗಬೇಕು ಮತ್ತು ನಾಡ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಹಾಗಾಗಿ ತಮ್ಮ ನಿಸ್ವಾರ್ಥ ಸಂಪೂರ್ಣ ಸಹಕಾರ ಅಗತ್ಯ ಎಂದರು.

ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಮಾತನಾಡಿ, ಶಿರೂರು ಮಠದ ಪರ್ಯಾಯ ಸಂಧರ್ಭದಲ್ಲಿ ಕೃಷ್ಣನ ಸೇವೆಗೆ ಎಲ್ಲರ ಪ್ರೀತಿಯ ಸಹಕಾರ ಅಗತ್ಯ, ನಮ್ಮ ಪರ್ಯಾಯವನ್ನು ಚಂದ ಮಾಡಲು ಹಿಂದೂ ಸಮಾಜ ಒಟ್ಟಾಗಿ ನಿಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಿತಿಯ ಮಟ್ಟಾರು ರತ್ನಾಕರ ಹೆಗ್ಡೆ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸಮಿತಿಯ ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಉಮೇಶ್ ನಾಯ್ಕ್, ರಾಜೀವ್ ಕುಲಾಲ್, ಸಂದೀಪ್ ಮಂಜ, ಮೋಹನ್ ಭಟ್, ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಚೇರ್ಕಾಡಿ ಸ್ವಾಗತಿಸಿ, ನಳಿನಿ ಪ್ರದೀಪ್ ವಂದಿಸಿದರು. ಕಮಲಾಕ್ಷ ಹೆಬ್ಬಾರ್ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೇಂದ್ರ ಸಚಿವರಿಂದ ಅಜ್ಜರಕಾಡಿನ ಆಕಾಶವಾಣಿ ಕೇಂದ್ರದಲ್ಲಿ ಎಫ್‌ಎಂ ಪ್ರೇಷಕದ ಉದ್ಘಾಟನೆ

ಉಡುಪಿ, ನ.13: ಉಡುಪಿ ಎಫ್‌ಎಂ ಸೇವೆಯ ಕಾರ್ಯಾರಂಭದಿಂದಾಗಿ ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ...

ಸಿ.ಎ. ಫೌಂಡೇಶನ್‌ ಪರೀಕ್ಷೆ: ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಕುಂದಾಪುರ, ನ. 13: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಐಪಿಎಸ್ ಅಧಿಕಾರಿ ಐ. ಜಯಕುಮಾರ್ ಭೇಟಿ

ಕಾಪು, ನ.13: ಮುಂಬೈ ಪೊಲೀಸ್ ಇಲಾಖೆಯ ಫೋರ್ಸ್ ಒನ್ ಘಟಕದ ವಿಶೇಷ...

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು: ಆಹಾರ ಮೇಳದಲ್ಲಿ ಭರ್ಜರಿ ವಹಿವಾಟು

ಉಡುಪಿ, ನ.13: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ಸಂಘದ...
error: Content is protected !!