ಸಾಣೂರು, ಆ.6: ಶಕ್ತಿ ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ (ರಿ) ಸಾಣೂರು ಗ್ರಾಮ ಪಂಚಾಯತ್ ಇದರ ವತಿಯಿಂದ ಸಾಣೂರು ಗ್ರಾಮ ಪಂಚಾಯತ್ ನ ಸುವರ್ಣ ಗ್ರಾಮೋದಯ ಸೌಧದಲ್ಲಿ ಅಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಆರೋಗ್ಯ ತಪಾಸಣಾ ಶಿಬಿರ ಹಾಗೂ ಹತ್ತು ಬಗೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಪ್ರಾಸ್ತಾವಿಕವಾಗಿ ನಿಕಟಪೂರ್ವ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿಗಾರ್ ಮಾತನಾಡಿದರು. ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಣೂರು ಶಾಖೆಯ ಬ್ಯಾಂಕ್ ಬರೋಡ ದ ಪ್ರಬಂಧಕರು ಅವಿನಾಶ್ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಅರುಣಾ ಕುಮಾರಿ ಮಲೇರಿಯಾ ವಿರೋಧ ಮಾಸಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ಅಂಗನವಾಡಿ ಟೀಚರ್ ಸಾಕಮ್ಮ ಆಟಿ ತಿಂಗಳ ಬಗ್ಗೆ ಮಾತನಾಡಿದರು. ನಂತರ ಆಟೋಟ ಸ್ಪರ್ಧೆಗಳ ಮತ್ತು ಹೆಚ್ಚು ತಿನಿಸು ಮಾಡಿದವರಿಗೆ ಪ್ರಥಮ ದ್ವಿತೀಯ ಹಾಗೂ ಸಮಾಧಾನಕರ ಬಹುಮಾನವನ್ನು ವಿತರಣೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷೆ ಗೀತಾ ದೇವಾಡಿಗ ಅಧ್ಯಕ್ಷೀಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಸುಮತಿ, ಪ್ರಮೀಳಾ ಹಾಗೂ ಒಕ್ಕೂಟ ದ ಕೋಶಾಧಿಕಾರಿ ವನಿತಾ ಪಿ ಉಪಸ್ಥಿತರಿದ್ದರು. ಒಟ್ಟು 55 ಬಗೆಯ ತಿನಿಸುಗಳನ್ನು ಮಾಡಲಾಯಿತು. ಸಭೆಯಲ್ಲಿ ವಾರ್ಡ್ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಸಾದಿನಿ ಜೈನ್ ನಿರೂಪಿಸಿದರು. ಜಯಶ್ರೀ ದೇವಾಡಿಗ ಸ್ವಾಗತಿಸಿ, ಶ್ವೇತಾ ದೇವಾಡಿಗ ವಂದಿಸಿದರು.




By
ForthFocus™