Tuesday, September 29, 2026
Tuesday, September 29, 2026

ಕುಂತಳನಗರ: ಬೃಹತ್ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

ಕುಂತಳನಗರ: ಬೃಹತ್ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

Date:

ಕಟಪಾಡಿ, ಜು.26: ರೋಟರಿ ಕ್ಲಬ್ ಮಣಿಪುರ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ರೆಡ್ ಕ್ರಾಸ್‌ ಕುಂದಾಪುರ ಬ್ಲಡ್ ಬ್ಯಾಂಕ್ ಮಿಷನ್ ಆಸ್ಪತ್ರ (ಲೋಂಬಾರ್ಡ್ ಮೆಮೋರಿಯಲ್) ಮತ್ತು ಕುಂತಳನಗರ ಸಂತ ಅಂತೋನಿ ಚರ್ಚ್ ಇದರ ಸಂಯುಕ್ತ ಆಶ್ರಯದಲ್ಲಿ ಚರ್ಚಿನ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚರ್ಚಿನ ಧರ್ಮಗುರು ಸ್ಟ್ಯಾನ್ಲಿ ಲೋಬೋ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಉತ್ತಮವಾದ ಆಹಾರ ಮತ್ತು ಜೀವನ ಶೈಲಿಯಿಂದ ರೋಗ ಬರುದನ್ನು ದೂರ ಮಾಡಬಹುದು. ಈ ನಿಟ್ಟಿನಲ್ಲಿ ಈ ರೀತಿಯ ಶಿಬಿರಗಳಿಂದ ನಮ್ಮ ಆರೋಗ್ಯ ತಪಾಸಣೆ ಮಾಡಲು ಅನುಕೂಲವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಜಯಕರ ಶೆಟ್ಟಿ, ಚರ್ಚಿನ ಉಪಾಧ್ಯಕ್ಷ ಸ್ಕ್ಯಾನಿ ಡಿಸೋಜಾ, ರೋಟರಿ ಕ್ಲಬ್ ಮಣಿಪುರ ಅಧ್ಯಕ್ಷ ರಾಜೇಶ್ ನಾಯ್ಕ್, ಕಾರ್ಯದರ್ಶಿ ಎ.ಜಿ ಡಿಸೋಜ, ವೈದ್ಯರುಗಳಾದ ಡಾ ಅರ್ಜುನ್ ಬಲ್ಲಾಳ, ಡಾ.ಪವಿತ್ರಾ, ಡಾ. ವೈಭವ್ ಜಯಂಟ್ಸ್ ಅಧ್ಯಕ್ಷ ಅಣ್ಣಯ್ಯ ದಾಸ್, ಸುಂದರ ಪೂಜಾರಿ ಮೂಡುಕುಕ್ಕುಡೆ, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರಿದ್ದರು. ರೋಟರಿ ಮಾಜಿ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್ ನಿರೂಪಿಸಿದರು. ಆಶಾ ಸಿಕ್ವೇರಾ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಾರಿದೀಪ ಹಾಗೂ ಹೈಮಾಸ್ಟ್ ಲೈಟ್‌ಗಳ ಸಮಸ್ಯೆ ಬಗೆಹರಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮನವಿ

ಮಣಿಪಾಲ, ಸೆ.29: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್...

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲಿಸಲು ಸಮಿತಿ ರಚನೆ- ಮಂಗಳೂರು ವಕೀಲರ ಸಂಘ ಸ್ವಾಗತ

ಮಂಗಳೂರು, ಸೆ.29: ಮಂಗಳೂರು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ...

ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

ಕುಂದಾಪುರ, ಸೆ.29: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...
error: Content is protected !!