ಉಪ್ಪೂರು, ಜು.7: ವಿಶ್ವ ಬ್ರಾಹ್ಮಣ ಸಮಾಜ್ಯೋಧಾರಕ ಸಂಘ ಉಪ್ಪೂರು ಹಾಗೂ ಶಶಿಧರ್ ಪುರೋಹಿತ್ ಅವರ ನೇತೃತ್ವದ ಸಮಾನ ಮನಸ್ಕ ತಂಡದವರ ಜಂಟಿ ಸಹಯೋಗದೊಂದಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೃಷ್ಣ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಶಿಧರ್ ಪುರೋಹಿತ್ ಕಟಪಾಡಿ, ಕೆನರಾ ಬ್ಯಾಂಕ್ ನ ಉದ್ಯೋಗಿ ವಜ್ರೇಶ್ವರಿ ಬ್ರಹ್ಮಾವರ, ಸರಕಾರಿ ಪ್ರೌಢಶಾಲೆ ಕಳ್ತೂರು ಶಿಕ್ಷಕರಾದ ಚಿತ್ರಕಲ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ ಮಾರಳಿ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾದಳ ಉಡುಪಿ ಇದರ ದಿವಾಕರ ಆಚಾರ್ಯ, ವಿಶ್ವಬ್ರಾಹ್ಮಣ ಯುವಕ ಸೇವದಳ ಉಡುಪಿ ನಿಕಟಪೂರ್ವ ಅಧ್ಯಕ್ಷ ಸದಾಶಿವ ಆಚಾರ್ಯ, ಎಸ್ ಕೆ. ಜಿ ಯ ನಿವೃತ್ತ ಮ್ಯಾನೇಜರ್ ವಾಸುದೇವ ಆಚಾರ್ಯ, ಯಜ್ಞಾನಾಥ ಆಚಾರ್ಯ ಬಾಳ್ಕಟ್, ಸಂಘದ ಗೌರವ ಸಲಹೆಗಾರರಾದ ಧನಂಜಯ ಆಚಾರ್ಯ, ಕಾಳಿಕಾಂಬ ಮಹಿಳಾ ಮಂಡಳಿಯ ಅಧ್ಯಕ್ಷರಾದ ಸುನಂದ ಆಚಾರ್ಯ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿ, ಕಾಳಿಕಾಂಬ ಮಹಿಳಾ ಬಳಗದ ನಿಕಟಪೂರ್ವ ಕಾರ್ಯದರ್ಶಿ ಕವಿತಾ ಟೀಚರ್ ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು, ಸಂಘಟನಾ ಕಾರ್ಯದರ್ಶಿ ಪಾಂಡುರಂಗ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.




By
ForthFocus™