ಕೋಟ, ಜೂ.29: ಆಡಳಿತ ವ್ಯವಸ್ಥೆಯಲ್ಲಿ ಜನಸ್ನೇಹಿ ಆಡಳಿತ ನೀಡುವ ಅಧಿಕಾರಿಗಳು ಬಲು ಅಪರೂಪ ಅದರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸುರೇಶ್ ಬಂಗೇರರ ಕಾರ್ಯವೈಕರಿ ಶ್ಲಾಘನೀಯ ಎಂದು ಕೋಟದ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು. ಭಾನುವಾರ ಕೋಟ ಗ್ರಾಮ ಪಂಚಾಯತ್ ಹಾಗೂ ಸಿಬ್ಬಂದಿ ವರ್ಗ ಸ್ಥಳೀಯ ಸಂಘಸಂಸ್ಥೆಗಳ ವತಿಯಿಂದ ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಸುರೇಶ್ ಬಂಗೇರ ಇವರಿಗೆ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋಟ ಪಂಚಾಯತ್ ಎಸ್ ಎಲ್ ಆರ್ ಎಂ ಘಟಕ, ಪಂಚಾಯತ್ ಸಿಬ್ಬಂದಿ ವರ್ಗ, ಗಿಳಿಯಾರು ಯುವಕ ಮಂಡಲ, ಪ್ರಕೃತಿ ಸಂಜೀವಿನಿ ಒಕ್ಕೂಟ, ಆಟೋ ಚಾಲಕ ಮಾಲಕರು ಪಂಚಾಯತ್ ಆವರಣ, ಸ್ಥಳೀಯ ಅಂಗಡಿ ಮುಂಗಟ್ಟು ಮಾಲೀಕರು, ಗ್ರಂಥಪಾಲಕರು ಕೋಟ, ಪಂಚವರ್ಣ ಸಂಘಟನೆ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಪಂಚಾಯತ್ ಇಒ ಎಚ್ ವಿ ಇಬ್ರಾಹಿಂಪುರ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಮೋಹನ್‌ರಾಜ್, ದ.ಕ ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ, ಕೋಟ ಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಪಂಚಾಯತ್ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ ಶೇಖರ್ ಸನ್ಮಾನ ಪತ್ರ ವಾಚಿಸಿದರು. ಹಂದಾಡಿ ಗ್ರಾ.ಪಂ ಕಾರ್ಯದರ್ಶಿ ಪೂರ್ಣಿಮಾ ನಿರೂಪಿಸಿ ವಂದಿಸಿದರು.




By
ForthFocus™