ಉಡುಪಿ, ಜೂ.9: ಉಡುಪಿ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಶನಿವಾರ ಮಿಥುನ ಲಗ್ನದಲ್ಲಿ ವೈಶ್ಯವಾಣಿ ಸಮಾಜದ ಕುಲಗುರು ಶ್ರೀ ಸಂಸ್ಥಾನ ಕಾಶೀ ತಥಾ ಹಳದೀಪುರ ಮಠಾಧೀಶರಾದ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ನಿಧಿ ಕುಂಭ ಸ್ಥಾಪನೆಯನ್ನು ನೆರವೇರಿಸಿದರು. ಬರುವ ಸಂವತ್ಸರದಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಿ ಬ್ರಹ್ಮಕಲಶೋತ್ಸವ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವವನ್ನು ನಡೆಸಲು ಸಮಾಜ ಬಾಂಧವರು ತನು ಮನ ಧನ ಸಹಕಾರ ನೀಡಬೇಕು ಎಂದು ಆಶೀರ್ವಚನ ನೀಡಿದರು.
ಆಡಳಿತ ಸಮಿತಿಯ ಪ್ರಧಾನ ಮೊಕ್ತೇಸರರಾದ ಕೆ ವಸಂತ್ ನಾಯಕ್, ಸಹ ಮೊಕ್ತೇಸರರಾದ ರಾಜೇಶ್ ಶೇಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶಂಕರ್ ನಾಯಕ್, ಅಧ್ಯಕ್ಷರಾದ ಶಶಿಕಾಂತ್ ನಾಯಕ್, ಕಾರ್ಯದರ್ಶಿ ವಿನೋದ್ ಗಾಂಸ್ಕರ್, ಕೋಶಾಧಿಕಾರಿ ನಿತ್ಯಾನಂದ ಶೇಟ್, ಕಿಶೋರ್ ಪಾಲ್, ರಾಘವೇಂದ್ರ ಗಾಂಸ್ಕರ್, ಗಣೇಶ ಗಾಂಸ್ಕರ್, ದೇವಳದ ಆಡಳಿತ ಸಮಿತಿ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶ್ರೀ ಗುರುಸೇವಾ ಸಮಿತಿ, ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿ ಸದಸ್ಯರು ಹಾಗೂ ವೈಶ್ಯವಾಣಿ ಸಮಾಜ ಬಾಂಧವರು ಉಪಸ್ಥಿತರಿದ್ದರು.




By
ForthFocus™