Saturday, October 3, 2026
Saturday, October 3, 2026

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು: ಕೌಶಲ ಶಿಕ್ಷಣಕ್ಕಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನೊಂದಿಗೆ ಒಡಂಬಡಿಕೆ

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು: ಕೌಶಲ ಶಿಕ್ಷಣಕ್ಕಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನೊಂದಿಗೆ ಒಡಂಬಡಿಕೆ

Date:

ತೆಂಕನಿಡಿಯೂರು, ಜೂ.9: ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ ಶಿಕ್ಷಣವನ್ನು ನೀಡುವುದಕ್ಕಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಡಾ. ಟಿ.ಎಂ.ಪೈ ಫೌಂಡೇಶನ್‌ನ ಅಂಗ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್, ಮಣಿಪಾಲ ಇದರೊಂದಿಗೆ ಒಡಂಬಡಿಕೆ (ಎಂ.ಓ.ಯು) ಮಾಡಿಕೊಳ್ಳಲಾಯಿತು. ಕೌಶಲಾಧಾರಿತ ಕೋರ್ಸುಗಳ ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಉದ್ಯೋಗ ಕೌಶಲವನ್ನು ವೃದ್ಧಿಸುವುದು, ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್, ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಾಗಾರಗಳು, ಕೈಗಾರಿಕಾ ಭೇಟಿ, ಕೈಗಾರಿಕಾ ವಾತಾವರಣ ಪರಿಚಯಿಸುವಿಕೆ, ಎರಡು ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಮತ್ತು ಪದವಿ ಜೊತೆಗೆ ಕೌಶಲ ಕೋರ್ಸುಗಳ ಶಿಕ್ಷಣವನ್ನು ನೀಡುವುದು ಈ ಒಡಂಬಡಿಕೆಯ ಉದ್ದೇಶಗಳಾಗಿವೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಿತ್ಯಾನಂದ ವಿ. ಗಾಂವಕರ ಮಾತನಾಡಿ ವಿದ್ಯಾರ್ಥಿಗಳಿಗೆ ಕಲಿಕೆಯ ಸಮಯದಲ್ಲಿ ಕೈಗಾರಿಕಾ ಪೂರಕ ಮತ್ತು ಉದ್ಯೋಗ ದೊರಕುವಂತಹ ಕೌಶಲಾಧಾರಿತ ತರಬೇತಿಯನ್ನು ನೀಡಿ ಪದವಿ ಪೂರೈಸುತ್ತಿದ್ದಂತೆ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು. ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್ ಸರ್ವಿಸಸ್ ವಲಯಗಳಲ್ಲಿ ಉದ್ಯೋಗಗಿಟ್ಟಿಸಲು ಹೊಸ ಬಿ.ಕಾಂ. ಕೋರ್ಸ್ – ಎ.ಇ.ಡಿ.ಪಿ. ಯನ್ನು ಕಾಲೇಜಿನಲ್ಲಿ ಈ ವರ್ಷ ಪ್ರಾರಂಭಿಸಿದ್ದು, ಕಲಿಕೆಯ ಜೊತೆಗೆ ಗಳಿಕೆಯನ್ನು ಮಾಡಲು ಅಪ್ರೆಂಟೈಸ್‌ಶಿಪ್‌ನ ಅವಕಾಶ ಕಲ್ಪಿಸಲಾಗಿದೆ ಎಂದರು.

ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್‌ನ ಚೇರ್ಮನ್ ಆದ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಈ ಸಂದರ್ಭದಲ್ಲಿ ಮಾತನಾಡುತ್ತಾ ಪದವಿ ಜೊತೆಗೆ ಉದ್ಯೋಗ ಕೌಶಲಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತೀರಾ ಅಗತ್ಯ. ಭಾಷಾ ಕೌಶಲ, ಸಂವಹನ, ಕಂಪ್ಯೂಟರ್ ಪರಿಣತಿ, ವೃತ್ತಿ ಕೌಶಲಗಳು, ನಾಯಕತ್ವ ಕಲೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ತಯಾರಿ ಮತ್ತು ಜ್ಞಾನ, ಸ್ವ-ಉದ್ಯೋಗಕ್ಕೆ ಸಂಬಂಧಿಸಿದ ವಿವಿಧ ಕೋರ್ಸ್ಗಳಾದ ಸಿ.ಎನ್.ಸಿ. ಮಶೀನ್ಸ್, ಕ್ಯಾಡ್ ಸೆಂಟರ್, ಫ್ಯಾಶನ್ ಡಿಸೈನ್, ರೊಬೊಟಿಕ್ಸ್, ತ್ರಿಡಿ, ಅನಿಮೇಷನ್ ಟೆಕ್ನಾಲಜಿ, ಆಟೊ ಮೋಟಿವ್ ಸರ್ವೀಸ್, ಇಂಟೀರಿಯರ್ ಡಿಸೈನ್, ಫರ್ನೀಚರ್ ಆಂಡ್ ಪಿಕ್ಸ್ರ‍್ಸ್, ಆಟೋಮೇಶನ್, ಎಐ, ಎಂ.ಎಲ್, ಸೈಬರ್ ಸೆಕ್ಯೂರಿಟಿ, ಇವಿ ಟೆಕ್ನಾಲಜಿ, ಬ್ಯೂಟಿ ಆಂಡ್ ವೆಲ್‌ನೆಸ್ ಮುಂತಾದವುಗಳು ಅವಶ್ಯಕವಾಗಿದೆ ಎಂದರು.

ಎಂ.ಎಸ್.ಡಿ.ಸಿ.ಯ ರಿಜಿಸ್ಟ್ರಾರ್ ಡಾ. ಅಂಜಯ್ಯ ದೇವಿನೇನಿ, ಪ್ರವೇಶ ಮತ್ತು ಸಂಪರ್ಕಾಧಿಕಾರಿ ಡಾ. ನಾರಾಯಣ ಶೆಣೈ ಕೆ., ತೆಂಕನಿಡಿಯೂರು ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್, ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಶಾಂತ ಎನ್, ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಕಾಲೇಜಿನ ಪ್ಲೇಸ್‌ಮೆಂಟ್ ಆಫೀಸರ್ ದಿನೇಶ್ ಎಂ. ಮತ್ತು ಎಂ.ಎಸ್.ಡಿ.ಸಿ.ಯ ಅನುಷಾ ಎರಡು ಸಂಸ್ಥೆಗಳ ಒಡಂಬಡಿಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ- ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ, ಅ.2: ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ, ಉಡುಪಿ...

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ.2: ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ...

ಏಷ್ಯನ್ ಗೇಮ್ಸ್: ಭಾರತದ ಒಟ್ಟು ಪದಕಗಳ ಸಂಖ್ಯೆ 76ಕ್ಕೆ ಏರಿಕೆ; ಪದಕ ಪಟ್ಟಿಯಲ್ಲಿ ಐದನೇ ಸ್ಥಾನ

ಯು.ಬಿ.ಎನ್.ಡಿ., ಅ.2: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ...
error: Content is protected !!