ಮಣಿಪಾಲ, ಜೂ.7: ಕೇಂದ್ರ ಆಯುಷ್ ಸಚಿವಾಲಯ ಮತ್ತು ಸಿಸಿ ಆರ್ ವೈ ಎನ್ ನವದೆಹಲಿ, ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ಅಂಡ್ ನ್ಯಾಚುರೋಪಥಿ ಸಂಯುಕ್ತ ಆಶ್ರಯದಲ್ಲಿ ‘ಮಧುಮೇಹಕ್ಕೆ ಯೋಗ ಚಿಕಿತ್ಸೆ’ ವಿಷಯವಾಗಿ ಒಂದು ದಿನದ ಉಚಿತ ವಿಚಾರಗೋಷ್ಠಿ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಕಾರ್ಯಕ್ರಮವಾಗಿ ಈ ಕಾರ್ಯಾಗಾರವನ್ನು 15/06/2025, ಭಾನುವಾರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಣಿಪಾಲದ ಮುನಿಯಾಲ್ ಸಮೂಹ ಸಂಸ್ಥೆಯ ಬುದ್ಧಾಯುರ್ವೇದ ಸಭಾಂಗಣದಲ್ಲಿ ನಡೆಸಲಾಗುತ್ತದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಪೂರ್ವ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 9611614628 / 9535574807 ಗೆ, ಗುರುವಾರ 12/06/2025 ರ ಒಳಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
‘ಮಧುಮೇಹಕ್ಕೆ ಯೋಗ ಚಿಕಿತ್ಸೆ’ ಕಾರ್ಯಾಗಾರ
‘ಮಧುಮೇಹಕ್ಕೆ ಯೋಗ ಚಿಕಿತ್ಸೆ’ ಕಾರ್ಯಾಗಾರ
Date:




By
ForthFocus™