Friday, May 15, 2026
Friday, May 15, 2026

ಕಾಪು: ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಕಾಪು: ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

Date:

ಉಡುಪಿ, ಏ.17: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜ್ಯ ಹೆದ್ದಾರಿಯಾಗಿರುವ ಮಂಗಳೂರು-ಅತ್ರಾಡಿ (ಎನ್.ಹೆಚ್.67) ರಸ್ತೆಯ ಕಿ.ಮೀ 71.74 ರಿಂದ 75.74 (ಹಿರೇಬೆಟ್ಟು-ಪಟ್ಲ ಹತ್ತಿರದ ರಸ್ತೆ) ರವರೆಗೆ ರಸ್ತೆ ಅಭಿವೃದ್ಧಿ (ಅಗಲೀಕರಣ) ಕಾಮಗಾರಿಗೆ ಮಂಜೂರಾಗಿದ್ದು, ಸದ್ರಿ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿರುವುದರಿಂದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು, ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಕಲ್ಪಿಸುವ ಅವಶ್ಯಕತೆ ಇರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221(ಎ)(2); (5) ರನ್ವಯ ಏಪ್ರಿಲ್ 18 ರಿಂದ ಮೇ 25 ರ ವರೆಗೆ ಹಿರೇಬೆಟ್ಟು-ಪಟ್ಲ ರಸ್ತೆಯ ಬೈಲುಗದ್ದೆ ಬಳಿಯ ರಸ್ತೆ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ, ಸದ್ರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅತ್ರಾಡಿ-ಪಟ್ಲ-ಒಂತಿಬೆಟ್ಟು-ಕೊಡಿಬೆಟ್ಟು-ಹಂಗಾರಕಟ್ಟೆ- ವರ್ವಾಡಿ ರಸ್ತೆ ಮೂಲಕ ಎಲ್ಲಾ ವಾಹನಗಳು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಎರಡನೇ ಆವೃತ್ತಿಯ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026

ಬಾರಕೂರು, ಮೇ 15: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ...

ಗೋಪಾಲಪುರ ಗರಡಿಮಜಲು ರಸ್ತೆಯ ಬದಿ ನಿರಂತರವಾಗಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳು

ಉಡುಪಿ, ಮೇ 14: ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ರಾಜ್ಯಮಟ್ಟದಲ್ಲೇ ಹೆಸರು ಗಳಿಸಿದೆ....

ಶ್ರೀಕೃಷ್ಣ ಮಠಕ್ಕೆ ಆನಂದ ಗುರೂಜಿ ಭೇಟಿ

ಉಡುಪಿ, ಮೇ 14: ಜೀ ಕನ್ನಡ ವಾಹಿನಿಯ ಮಹರ್ಷಿವಾಣಿ ಖ್ಯಾತಿಯ ಡಾ....

ಕಾಳಾವರ ವರದರಾಜ ಕಾಲೇಜು ವಾರ್ಷಿಕೋತ್ಸವ

ಕೋಟೇಶ್ವರ, ಮೇ 14: ದೃಢತೆಯಿಂದ ಕೂಡಿದ ಅವಿರತವಾದ ಪರಿಶ್ರಮ, ತಾಳ್ಮೆ ಮತ್ತು...
error: Content is protected !!