Friday, June 5, 2026
Friday, June 5, 2026

ಎರಡನೇ ಆವೃತ್ತಿಯ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026

ಎರಡನೇ ಆವೃತ್ತಿಯ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026

Date:

ಬಾರಕೂರು, ಮೇ 15: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರಿನಲ್ಲಿ ಏಪ್ರಿಲ್ 30 ರಂದು ಮಹಿಳಾ ಆಟಗಾರರನ್ನು ಸೇರಿಸಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಎರಡನೇ ಆವೃತ್ತಿಯ ಒಂದು ದಿನದ ವಿಶಿಷ್ಟ ಕ್ರಿಕೆಟ್ ಪಂದ್ಯಾಟ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026 ನಡೆಯಿತು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವೆ ಸೌಹಾರ್ದತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜನೆಗೊಂಡ ಈ ಕ್ರಿಕೆಟ್ ಪಂದ್ಯಾಟದಲ್ಲಿ ಕಾಲೇಜಿನ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಉದ್ಘಾಟನಾ ಸಮಾರಂಭದಲ್ಲಿ ಮಂದಾರ್ತಿಯ ಉದ್ಯಮಿಯಾದ ಗುರುಪ್ರಸಾದ್ ಭಾಗವಹಿಸಿ ಕಾಲೇಜಿನಲ್ಲಿ ಹೊಸ ಪ್ರಾಂಶುಪಾಲರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ, ಈ ರೀತಿಯ ಪಂದ್ಯಾವಳಿಗಳು ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವಲ್ಲಿ ವಿಶೇಷ ಪರಿಣಾಮ ಬಿರುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಎಸ್ ರವರು ಎಲ್ಲಾ ಆಟಗಾರರಿಗೆ ಶುಭಾಶಯವನ್ನು ತಿಳಿಸಿ, ಯಾವುದೇ ವಿದ್ಯಾಸಂಸ್ಥೆಯಲ್ಲಿ ನಡೆಯದ ಈ ರೀತಿಯ ವಿಶಿಷ್ಟ ಪರಿಕಲ್ಪನೆಯ ಕ್ರೀಡಾ ಸ್ಪರ್ಧೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೀವಿ ಎಂಬುದನ್ನು ನೆನಪಿಸಿದರು. ರಾಯಲ್ ಚಾಲೆಂಜರ್ಸ್ ಬಾರಕೂರು ತಂಡವು ಪ್ರಥಮ ಬಹುಮಾನವನ್ನು ಮತ್ತು ಗಲ್ಲಿ ಫ್ರೆಂಡ್ಸ್ ಬಾರಕೂರು ದ್ವಿತೀಯ ಬಹುಮಾನವನ್ನು ಪಡೆಯಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಿ.ಕಾಂ ನ ದಿನೇಶ್, ಸರಣಿಶ್ರೇಷ್ಠ ಪ್ರಶಸ್ತಿಯನ್ನು ಎಂ.ಎಸ್.ಡಬ್ಲ್ಯೂನ ದರ್ಶನ್, ಅತ್ಯುತ್ತಮ ದಾಂಡಿಗ ಪ್ರಶಸ್ತಿಯನ್ನು ಪ್ರೀತಮ್, ಅತ್ಯುತ್ತಮ ಎಸೆತಗಾರ ಪ್ರಸ್ತಿಯನ್ನು ಲುಕಾಸ್ ಮತ್ತು ವಿಮೆನ್ ಎಮರ್ಜಿಂಗ್ ಪ್ಲೇಯರ್ ಪ್ರಸ್ತಿಯನ್ನು ಬಿಸಿಎ ಯ ರೂಪ ಪಡೆದುಕೊಂಡರು.

ಕ್ರೀಡಾಕೂಟದ ಸಂಪೂರ್ಣ ರೂಪರೇಷೆ ರಚಿಸಿ, ಮಾರ್ಗದರ್ಶನವನ್ನು ಸಂಯೋಜಕರಾದ ವಾಣಿಜ್ಯ ಶಾಸ್ತ್ರ ವಿಭಾಗದ ಡಾ. ರಾಧಾಕೃಷ್ಣ ನಾಯಕ ನೀಡಿದರು. ಕಾಲೇಜಿನ ಪ್ರಾಂಶುಪಾಲರನ್ನು ಒಳಗೊಂಡು, ಮಹಿಳೆಯರನ್ನೂ ಸೇರಿಸಿ ಹೆಚ್ಚಿನ ಹಿರಿಯ ಮತ್ತು ಕಿರಿಯ ಉಪನ್ಯಾಸಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ

ಬೆಂಗಳೂರು, ಜೂ.4: ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ,...

ದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು: ಡಾ.ಸುಧಾಕರ್ ಶೆಟ್ಟಿ; ಸೇನೆಗೆ ಒಂದು ಲಕ್ಷ ರೂಪಾಯಿ ಹಸ್ತಾಂತರದ ಮೂಲಕ ಮಾಲಿಕೆ ಪ್ರಾರಂಭ

ಕಾರ್ಕಳ, ಜೂ.4: ಶಿಕ್ಷಣದ ಜೊತೆಗೆ ದೇಶಭಕ್ತಿಯನ್ನು ನಮ್ಮ ವ್ಯಕ್ತಿತ್ವದೊಂದಿಗೆ ಜೋಡಿಸಿಕೊಂಡಾಗ ರಾಷ್ಟ್ರ...

ಶಿರ್ವ: ಜೀವನೋಪಾಯ ಸೇವಾ ಕೇಂದ್ರ ಉದ್ಘಾಟನೆ

ಶಿರ್ವ, ಜೂ.೪: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ, ಜಿಲ್ಲಾ...

ಸಮಾಜ ಸೇವಕ ಗುರುದತ್ ಪ್ರಭು ಅವರಿಂದ ಪೌರ ಕಾರ್ಮಿಕರಿಗೆ ಹಣ್ಣು, ಬಟ್ಟೆ ವಿತರಣೆ

ಬೆಂಗಳೂರು, ಜೂ.4: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಸಮಾಜ ಸೇವಕರು...
error: Content is protected !!