Friday, October 2, 2026
Friday, October 2, 2026

ದ್ವಿತೀಯ ಪಿಯುಸಿ ಫಲಿತಾಂಶ: ವಿದ್ಯಾ ನಾಯಕ್ ಅವರಿಗೆ 97.83 ಪರ್ಸೆಂಟೇಜ್

ದ್ವಿತೀಯ ಪಿಯುಸಿ ಫಲಿತಾಂಶ: ವಿದ್ಯಾ ನಾಯಕ್ ಅವರಿಗೆ 97.83 ಪರ್ಸೆಂಟೇಜ್

Date:

ಉಡುಪಿ, ಏ.9: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಉಡುಪಿ ಕುಂಜಿಬೆಟ್ಟು ಶಾರದಾ ಪದವಿಪೂರ್ವ ಕಾಲೇಜಿನ ವಿದ್ಯಾ ನಾಯಕ್ ಅವರು 600 ರಲ್ಲಿ 587 ಅಂಕಗಳನ್ನು ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಇವರಿಗೆ ಭೌತಶಾಸ್ತ್ರದಲ್ಲಿ 100, ಗಣಕ ವಿಜ್ಞಾನದಲ್ಲಿ 100, ರಸಾಯನಶಾಸ್ತ್ರದಲ್ಲಿ 99, ಗಣಿತದಲ್ಲಿ 99, ಕನ್ನಡ 95, ಇಂಗ್ಲಿಷ್ ನಲ್ಲಿ 94 ಅಂಕಗಳು ಸಿಕ್ಕಿದೆ. ಇವರು ಮಣಿಪಾಲ ಮಾಹೆ ಎಂ.ಐ.ಟಿ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ನಾಯಕ್ ಮತ್ತು ಪ್ರತಿಮಾ ನಾಯಕ್ ಇವರ ಪುತ್ರಿ. ಇವರ ಸಾಧನೆಗೆ ಶಾರದಾ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ನಿರ್ದೇಶಕರು, ಪ್ರಾಂಶುಪಾಲರು ಮತ್ತು ಬೋಧಕ ಬೋಧಕೇತರರು ಅಭಿನಂದನೆ ಸಲ್ಲಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಾಂಧಿ ನೆನಪಲ್ಲಿ ಸಾಮರಸ್ಯ ನಡಿಗೆ

ಹಿರಿಯಡಕ, ಅ.2: ಈ ನೆಲದ ಆತ್ಮವಾಗಿ ಭಾರತವನ್ನು ಮುನ್ನಡೆಸಿ ಜಗತ್ತನ್ನು ಎಚ್ಚರಿಸುವ...

ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 125ನೇ ವರ್ಷಚಾರಣೆಗೆ ಚಾಲನೆ

ಉಡುಪಿ, ಅ.2: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ ಪ್ರಸಕ್ತ...

ಏಷ್ಯನ್ ಗೇಮ್ಸ್: ಭಾರತದ ಪದಕ ಪಟ್ಟಿಗೆ 6 ಪದಕಗಳ ಸೇರ್ಪಡೆ

ಯು.ಬಿ.ಎನ್.ಡಿ., ಅ.1: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು...
error: Content is protected !!