Saturday, November 14, 2026
Saturday, November 14, 2026

ಕರಾವಳಿ ಜಿಲ್ಲೆಯ ಪಾಲಿಗೆ ಮಲತಾಯಿ ಬಜೆಟ್: ಯಶ್ಪಾಲ್ ಸುವರ್ಣ

ಕರಾವಳಿ ಜಿಲ್ಲೆಯ ಪಾಲಿಗೆ ಮಲತಾಯಿ ಬಜೆಟ್: ಯಶ್ಪಾಲ್ ಸುವರ್ಣ

Date:

ಉಡುಪಿ, ಮಾ.7: ಕರಾವಳಿ ಜಿಲ್ಲೆಯನ್ನು ಸದಾ ನಿರ್ಲಕ್ಷಿಸುವ ರಾಜ್ಯ ಸರ್ಕಾರದ ನಿಲುವು ಈ ಬಾರಿಯ ಬಜೆಟ್ ನಲ್ಲೂ ಮುಂದುವರೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಜನತೆಯ ಅಭಿವದ್ಧಿ ಬೇಡಿಕೆಗೆ ಯಾವುದೇ ಯೋಜನೆ ಘೋಷಿಸದೆ ಮಲತಾಯಿ ಧೋರಣೆಯ ಬಜೆಟ್ ಮಂಡಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ. ಕರಾವಳಿ ಜಿಲ್ಲೆಯ ಮೀನುಗಾರಿಕೆ ಹಾಗೂ ಬಂದರು ಅಭಿವೃದ್ಧಿಗೆ ಯಾವುದೇ ಅನುದಾನ ಒದಗಿಸಿಲ್ಲ, ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು, ಬ್ರಹ್ಮಾವರ ಕೃಷಿ ಕಾಲೇಜು ಘೋಷಣೆಯ ಭರವಸೆ ಈಡೇರಿಲ್ಲ.

ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಗೆ ಅಗತ್ಯ ಅನುದಾನ, ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತ ಏರಿಕೆ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ, ನಾರಾಯಣ ಗುರು ಅಭಿವೃಧ್ದಿ ನಿಗಮಕ್ಕೆ ಅನುದಾನದ ಬಗ್ಗೆ ಯಾವುದೇ ಘೋಷಣೆ ಮಾಡದೇ ಸಿದ್ದರಾಮಯ್ಯ ತಮ್ಮ ದಾಖಲೆಯ 16 ನೇ ಬಜೆಟ್ ಬಗ್ಗೆ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೇಂದ್ರ ಸಚಿವರಿಂದ ಅಜ್ಜರಕಾಡಿನ ಆಕಾಶವಾಣಿ ಕೇಂದ್ರದಲ್ಲಿ ಎಫ್‌ಎಂ ಪ್ರೇಷಕದ ಉದ್ಘಾಟನೆ

ಉಡುಪಿ, ನ.13: ಉಡುಪಿ ಎಫ್‌ಎಂ ಸೇವೆಯ ಕಾರ್ಯಾರಂಭದಿಂದಾಗಿ ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ...

ಸಿ.ಎ. ಫೌಂಡೇಶನ್‌ ಪರೀಕ್ಷೆ: ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಕುಂದಾಪುರ, ನ. 13: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಐಪಿಎಸ್ ಅಧಿಕಾರಿ ಐ. ಜಯಕುಮಾರ್ ಭೇಟಿ

ಕಾಪು, ನ.13: ಮುಂಬೈ ಪೊಲೀಸ್ ಇಲಾಖೆಯ ಫೋರ್ಸ್ ಒನ್ ಘಟಕದ ವಿಶೇಷ...

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು: ಆಹಾರ ಮೇಳದಲ್ಲಿ ಭರ್ಜರಿ ವಹಿವಾಟು

ಉಡುಪಿ, ನ.13: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ಸಂಘದ...
error: Content is protected !!