Thursday, July 30, 2026
Thursday, July 30, 2026

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

Date:

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​ ಇಲಾಖೆ, ​ನುಡಿ ಘಟಕ ಮಣಿಪಾಲ ಸಿವಿಲ್ ಇಂಜಿನಿಯರಿಂಗ್ ವಿಭಾಗ ಸಹಯೋಗದೊಂದಿಗೆ ಸಂಚಾರ ಜಾಗೃತಿ ಸಪ್ತಾಹವನ್ನು ಯಶಸ್ವಿಯಾಗಿ ನಡೆಯಿತು. ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಮನೋಹರ್ ಹೆಚ್ ಕೆ ಉದ್ಘಾಟಿಸಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಮತ್ತು ಸಮುದಾಯಕ್ಕೆ ಟ್ರಾಫಿಕ್ ಸಿಗ್ನಲ್ ಜಾಗೃತಿ, ಮದ್ಯಪಾನ ಮತ್ತು ಚಾಲನೆಯ ಅಪಾಯಗಳು, ಜವಾಬ್ದಾರಿಯುತ ಪಾರ್ಕಿಂಗ್ ಅಭ್ಯಾಸಗಳು, ಸಂಚಾರ ಅಡಚಣೆಗಳನ್ನು ಕಡಿಮೆ ಗೊಳಿಸುವುದು, ಟ್ರಾಫಿಕ್ ಸಿಗ್ನಲ್ ಜಾಗೃತಿ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎನ್‌ಎಸ್‌ಎಸ್ ತಂಡದ ನಾಯಕರಾದ ವಿಜಯಾಂಶ್ ಚೌರಾಸಿಯಾ ವಂದಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಮದ್ದೋಡಿ, ಡಾ.ಲಕ್ಷ್ಮಣ ರಾವ್, ಡಾ. ಪೂರ್ಣಿಮಾ ಭಾಗವತ​, ಡಾ. ಹರ್ಷಿಣಿ ದಾಸರಿ, ಡಾ. ಮಹಾಶ್ವೇತಾ ಮೇಗಾರ್, ಘಟಕದ ಮುಖ್ಯಸ್ಥರಾದ ಅಕ್ಷತ ಕುರಾನಾ, ಸಂಜನಾ ಮತ್ತು ಕಣವ್ ಸಚ್ದೇವ ಮುಂತಾದವರು ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜು.30: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ವಿಪ್ರ ಸ್ವ-ಉದ್ಯಮ...

ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ

ಕೋಟ, ಜು.30: ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆಯು ಮಂಗಳವಾರ...

ಬಾರ್ಕೂರು: ‘ಸಾಹಿತ್ಯ ಮತ್ತು ಜೀವನ ದರ್ಶನ’ ವಿಶೇಷ ಉಪನ್ಯಾಸ

ಬಾರ್ಕೂರು, ಜು.30: ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ...

ಬಿ. ಬಿ. ಹೆಗ್ಡೆ ಕಾಲೇಜು: ರೋಟರಾಕ್ಟ್ ಕ್ಲಬ್ ಪದಗ್ರಹಣ

ಕುಂದಾಪುರ, ಜು.30: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ರೋಟರಾಕ್ಟ್ ಕ್ಲಬ್‌ನ...
error: Content is protected !!