Thursday, September 10, 2026
Thursday, September 10, 2026

ವಿದ್ಯಾಭಾರತಿ: ಯೋಗಾಸನ ಸ್ಪರ್ಧೆ

ವಿದ್ಯಾಭಾರತಿ: ಯೋಗಾಸನ ಸ್ಪರ್ಧೆ

Date:

ಸಿದ್ದಾಪುರ, ಆ.9: ಯೋಗಾಸನ ಕೇವಲ ಆಸನವಲ್ಲ, ಅದು ದೇಹ ಮತ್ತು ಮನಸ್ಸುಗಳನ್ನು ಸೀಮಿತವಾಗಿಡುವ ಸಾಧನ. ಯೋಗ ವಿಚಾರ ಪುರಾಣಗಳಲ್ಲಿ ಉಲ್ಲೇಖವಿದೆ. ಯೋಗದ ಆರಾಧ್ಯ ದೈವ ಶಿವನಾಗಿರುತ್ತಾನೆ. ಯೋಗ ಗುರು ಪತಂಜಲಿ ಇದನ್ನು ಜಗತ್ತಿಗೆ ಬರೆಹ ರೂಪದಲ್ಲಿ ನೀಡಿದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಶೇಖರ ಶೆಟ್ಟಿಗಾರ ಹೇಳಿದರು. ಸಿದ್ದಾಪುರದ ಸರಸ್ವತಿ ವಿದ್ಯಾಲಯ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಸರಸ್ವತಿ ವಿದ್ಯಾಲಯ ಸಿದ್ದಾಪುರ ಜಂಟಿ ಆಶ್ರಯದಲ್ಲಿ ನಡೆದ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಕಾಮತ್, ಆಡಳಿತ ಮಂಡಳಿಯ ಸದಸ್ಯ ಶ್ರೀನಾಥ್ ಪೈ, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಯೋಗ ಶಿಕ್ಷಣ ಪ್ರಮುಖ್ ಮಂಜುನಾಥ ಬೆಂಗಳೂರು, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ, ಕಾರ್ಯದರ್ಶಿ ಮಹೇಶ ಹೈಕಾಡಿ, ಜಿಲ್ಲಾ ಯೋಗ ಪ್ರಮುಖ್ ಸಂಜಯ್, ಅಂಪಾರು ವಲಯದ ಶಿಕ್ಷಣ ಸಂಯೋಜಕ ಶಂಕರ್ ಯು., ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ವೇತಾ, ಆಡಳಿತಾಧಿಕಾರಿ ಸೌಭಾಗ್ಯ, ಸರಸ್ವತಿ ಶಿಶು ಮಂದಿರದ ಸಂಯೋಜಕಿ ಜಯಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂತ ಯೋಗಾಸನ ಸ್ಪರ್ಧೆ ತೀರ್ಪುಗಾರರಾಗಿ ರಾಷ್ಟ್ರೀಯ ಯೋಗಾಸನ ತೀರ್ಪುಗಾರ ಅಶೋಕ, ಸವಿತಾ, ಸಬಿತ, ಅಮಿತ್, ಸುಜಾತ ಶೆಟ್ಟಿ, ಸಂಜೀವ್ ಮೊಗವೀರ, ಚೆನ್ನಮ್ಮ, ನವೀನ್, ಸುಮಾ, ಶರತ್ ಸಹಕರಿಸಿದರು. ವೀರೇಶ, ಪ್ರವೀಣ್, ನಮಿತಾ ಯೋಗಾಸನ ಸ್ಪರ್ಧೆಯ ಅಂಕಣ ನಿರ್ವಹಣೆ ಮಾಡಿದರು. ವಿದ್ಯಾರ್ಥಿಗಳು ಯೋಗ-ಯಕ್ಷಗಾನ ಸಮ್ಮಿಲನದ ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಪ್ರಾಂತ ಯೋಗಾಸನ ಸ್ಪರ್ಧೆಯಲ್ಲಿ ಬೆಳಗಾವಿ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಕಲಬುರ್ಗಿ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದರು. ಮಾತಾಜಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರಿಂದ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ನಾಮಫಲಕ, ಪೋಸ್ಟರ್‍ಗಳ ಬಿಡುಗಡೆ

ಚಾಮರಾಜನಗರ, ಸೆ.9: ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕುರಿತು ಸುಲಭವಾಗಿ ಮಾಹಿತಿ ದೊರೆಯುವಂತೆ...

ಉಡುಪಿಯಲ್ಲಿ ಬನ್ನಂಜೆಯವರ ಆತ್ಮಕಥನ ‘ಇಂದು ಎನಗೆ ಗೋವಿಂದ’ ಚಿತ್ರದ ವಿಶೇಷ ಪ್ರದರ್ಶನ – ಸೆ.10 ರಂದು ಮೂರು ಪ್ರದರ್ಶನ

ಉಡುಪಿ, ಸೆ.9: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಬೆಂಗಳೂರು ಅರ್ಪಿಸುವ, ನಾಡಿನ ಹೆಮ್ಮೆಯ...

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ವಿಮಾನ ಪ್ರಯಾಣ ಅಸ್ತವ್ಯಸ್ತ

ಯು.ಬಿ.ಎನ್.ಡಿ., ಸೆ.8: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಎಂಟು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಯನ್ನು...
error: Content is protected !!