Friday, October 2, 2026
Friday, October 2, 2026

ಉಡುಪಿಯಲ್ಲಿ ಬನ್ನಂಜೆಯವರ ಆತ್ಮಕಥನ ‘ಇಂದು ಎನಗೆ ಗೋವಿಂದ’ ಚಿತ್ರದ ವಿಶೇಷ ಪ್ರದರ್ಶನ – ಸೆ.10 ರಂದು ಮೂರು ಪ್ರದರ್ಶನ

ಉಡುಪಿಯಲ್ಲಿ ಬನ್ನಂಜೆಯವರ ಆತ್ಮಕಥನ ‘ಇಂದು ಎನಗೆ ಗೋವಿಂದ’ ಚಿತ್ರದ ವಿಶೇಷ ಪ್ರದರ್ಶನ – ಸೆ.10 ರಂದು ಮೂರು ಪ್ರದರ್ಶನ

Date:

ಉಡುಪಿ, ಸೆ.9: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಬೆಂಗಳೂರು ಅರ್ಪಿಸುವ, ನಾಡಿನ ಹೆಮ್ಮೆಯ ಸಾಹಿತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ *’ಇಂದು ಎನಗೆ ಗೋವಿಂದ’* ಚಲನಚಿತ್ರದ ವಿಶೇಷ ಪ್ರದರ್ಶನವು ಸೆಪ್ಟೆಂಬರ್ 10, ಗುರುವಾರದಂದು ಉಡುಪಿಯ ಗೀತಾ ಮಂದಿರದ ಪುತ್ತಿಗೆ ಮಠದ ನೃಸಿಂಹ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿಗಳಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ದಿವ್ಯ ಆಶೀರ್ವಾದದೊಂದಿಗೆ* ಜರಗಲಿದೆ.

ಈ ಚಿತ್ರಕ್ಕೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲದ ಕಾರಣ ಮುಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಇರುವುದಿಲ್ಲ. ಸಾಹಿತ್ಯ ಮತ್ತು ಸಿನಿ ಪ್ರೇಮಿಗಳಿಗೆ ಇದು ಒಂದು ಅಪೂರ್ವ ಅವಕಾಶ.

ಪ್ರದರ್ಶನದ ಸಮಯ:
– ಮೊದಲ ಪ್ರದರ್ಶನ: ಬೆಳಿಗ್ಗೆ 10.00 ಗಂಟೆಗೆ (ಅವಶ್ಯಕತೆ ಇದ್ದಲ್ಲಿ )
– ಎರಡನೇ ಪ್ರದರ್ಶನ: ಮಧ್ಯಾಹ್ನ 2.00 ಗಂಟೆಗೆ
– ಮೂರನೇ ಪ್ರದರ್ಶನ: ಸಂಜೆ 5.30 ಕ್ಕೆ

ಪ್ರವೇಶ ಉಚಿತವಾಗಿದ್ದು, ಸಭಾಂಗಣದಲ್ಲಿ ಕೇವಲ 320 ಆಸನಗಳು ಮಾತ್ರ ಲಭ್ಯವಿದೆ. ಆಸಕ್ತರು ಕಡ್ಡಾಯವಾಗಿ ಕೆಳಗಿನ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ನೋಂದಣಿ ಲಿಂಕ್:
https://docs.google.com/forms/d/e/1FAIpQLScyf0MDEh4sFm_PpaVRNHg5p8fwtqwfj6SnbR127rfd1pxftA/viewform?usp=publish-editor

ಹೆಚ್ಚಿನ ಮಾಹಿತಿಗಾಗಿ ಆಸ್ಟ್ರೋ ಮೋಹನ್, ಜನಾರ್ದನ ಕೊಡವೂರು, ರವಿರಾಜ್ ಎಚ್.ಪಿ. ಅವರನ್ನು ಸಂಪರ್ಕಿಸಬಹುದು ಎಂದು ಬನ್ನಂಜೆ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಏಷ್ಯನ್ ಗೇಮ್ಸ್: ಭಾರತದ ಪದಕ ಪಟ್ಟಿಗೆ 6 ಪದಕಗಳ ಸೇರ್ಪಡೆ

ಯು.ಬಿ.ಎನ್.ಡಿ., ಅ.1: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು...

ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ

ಉಡುಪಿ, ಅ.1: ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ವಿವಿಧ ಸಚಿವಾಲಯ,...
error: Content is protected !!