Monday, May 4, 2026
Monday, May 4, 2026

ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು- ಸೌಹಾರ್ದ ಸಂಗೀತ ಕಾರ್ಯಕ್ರಮ

ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು- ಸೌಹಾರ್ದ ಸಂಗೀತ ಕಾರ್ಯಕ್ರಮ

Date:

ಕೆಮ್ಮಣ್ಣು: ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು ಇಲ್ಲಿ ಕರಾವಳಿ ಸಂಗೀತ ಒಕ್ಕೂಟದ ಕಲಾವಿದರಿಂದ ಸೌಹಾರ್ದ ಸಂಗೀತ ಕಾರ್ಯಕ್ರಮ ಜೊತೆಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ, ಧನಸಹಾಯ, ಮಕ್ಕಳಿಗೆ ನಗದು ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕೂಟದ ವಲಯಾಧ್ಯಕ್ಷೆ ಮುಕ್ತ ಶ್ರೀನಿವಾಸ್ ಭಟ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ್ ರಾವ್ ವಹಿಸಿದ್ದರು.

ಸಿಡಿಸಿ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ನಂದಕಿಶೋರ್ ಕೆಮ್ಮಣ್ಣು, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಂದನ, ಕೆ.ಎಸ್.ಕೆ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಸದಾಶಿವ ದಾಸ್ ಪಾಂಡೇಶ್ವರ, ಸಂಚಾಲಕರಾದ ಶರತ್ ಉಚ್ಚಿಲ, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಭಟ್, ಸುಭಾಷಿತ್ ಕುಮಾರ್ ಪಿ, ಹಾಗೂ ಒಕ್ಕೂಟದ ಅನೇಕ ಕಲಾವಿದರು ಭಾಗವಹಿಸಿದ್ದರು.

ಒಕ್ಕೂಟದ ಉಪಾಧ್ಯಕ್ಷೆ ಮುಕ್ತ ಶ್ರೀನಿವಾಸ್ ರಾವ್ ಇವರನ್ನು ಸನ್ಮಾನಿಸಲಾಯಿತು. ಗಾಯಕ ಹಾಗೂ ನಿರೂಪಕ ಪ್ರೇಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಟಪಾಡಿ: ನೂತನವಾಗಿ ಆರಂಭಗೊಂಡ ಸಾರಿಗೆ ಬಸ್ಸಿಗೆ ಸಂಭ್ರಮದ ಸ್ವಾಗತ

ಬ್ರಹ್ಮಾವರ, ಮೇ 4: ಬ್ರಹ್ಮವಾರ ಮಟಪಾಡಿ ನೀಲಾವರ ಮಾರ್ಗವಾಗಿ ತೆರಳುವ ಉಡುಪಿ...

ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ: ಸಟ್ವಾಡಿ ವಿಜಯ ಶೆಟ್ಟಿ

ಕುಂದಾಪುರ, ಮೇ 4: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಆಹ್ವಾನಿತ...
error: Content is protected !!