ಬ್ರಹ್ಮಾವರ, ಮೇ 4: ಬ್ರಹ್ಮವಾರ ಮಟಪಾಡಿ ನೀಲಾವರ ಮಾರ್ಗವಾಗಿ ತೆರಳುವ ಉಡುಪಿ ಕೊಕ್ಕರ್ಣೆ ನೂತನ ಸರ್ಕಾರಿ ಬಸ್ಸಿಗೆ ಮಟಪಾಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಫ್ರೆಂಡ್ಸ್ ಮಟಪಾಡಿ ಯೂಥ್ ಕ್ಲಬ್ ಮಟಪಾಡಿ ಇವರ ವತಿಯಿಂದ ಮಟಪಾಡಿ ಗ್ರಾಮಕ್ಕೆ ಆಗಮಿಸಿದ ಸರಕಾರಿ ಬಸ್ ಗೆ ಹೂವಿನ ಹಾರ ಹಾಕಿ ಆರತಿ ಬೆಳಗಿ ತೆಂಗಿನಕಾಯಿ ಒಡೆದು ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು ಹಾಗೂ ಬಸ್ಸಿನಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರಿಗೆ ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ವತಿಯಿಂದ ತಂಪು ಪಾನಿಯನ್ನು ನೀಡಲಾಯಿತು.
ಫ್ರೆಂಡ್ಸ್ ಮಟಪಾಡಿ ಕ್ಲಬ್ಬಿನ ಅಧ್ಯಕ್ಷರಾದ ಚೇತನ್ ಜಿ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಾಯ್ಸನ್ ಕೋಶಾಧಿಕಾರಿ ಚೇತನ ಆಚಾರ್ಯ, ಸುದರ್ಶನ್, ಅಂಕುಶ್, ಗೌರವ ಸಲಹೆಗಾರ ಶರೋನ್, ಸದಸ್ಯರಾದ ಸುಬ್ರಹ್ಮಣ್ಯ ಆಚಾರ್ಯ, ಶರತ್ ನಾಯಕ್, ಭರತ್ ನಾಯಕ್, ಅಕ್ಷಯ ಮತ್ತು ಮಿಥುನ ಅಮೀನ್, ರಾಹುಲ್ ಪೂಜಾರಿ ಹಾಗೂ ಸ್ಥಳೀಯ ಮಟಪಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು. ಬಸ್ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಧನ್ಯವಾದ ತಿಳಿಸಲಾಯಿತು ಹಾಗೂ ಈ ಭಾಗದ ಎಲ್ಲಾ ಜನರು ಈ ಬಸ ಪ್ರಯಾಣದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಯಿತು.




By
ForthFocus™