Saturday, June 6, 2026
Saturday, June 6, 2026

ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ: ಸಟ್ವಾಡಿ ವಿಜಯ ಶೆಟ್ಟಿ

ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ: ಸಟ್ವಾಡಿ ವಿಜಯ ಶೆಟ್ಟಿ

Date:

ಕುಂದಾಪುರ, ಮೇ 4: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಆಹ್ವಾನಿತ ಅಂತರ್ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಅದ್ದೂರಿಯಾಗಿ ಕಾಲೇಜಿನ ದಿ. ಅಪ್ಪಣ್ಣ ಹೆಗ್ಡೆ ವೇದಿಕೆಯಲ್ಲಿ ಜರುಗಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾಕ್ತನ ವಿದ್ಯಾರ್ಥಿಯಾದ ಸಟ್ವಾಡಿ ವಿಜಯ ಶೆಟ್ಟಿ ಮಾತನಾಡಿ ಕಾಲೇಜು ಜೀವನವೂ ನನ್ನ ಜೀವನದ ಮುಖ್ಯ ಹಂತವಾಗಿದ್ದು, ನನ್ನ ವ್ಯಕ್ತಿತ್ವವನ್ನು ರೂಪಿಸಿದ ಈ ಕಾಲೇಜು ಶಿಸ್ತು, ಮೌಲ್ಯ ಪರಿಶ್ರಮ ಮತ್ತು ಕನಸು ಸಾಧಿಸಲು ಬೇಕಾಗಿರುವ ಧೈರ್ಯವನ್ನು ಕಲಿಸಿದೆ. ಆದ್ದರಿಂದ ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ, ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ ನಿಮ್ಮ ಶಿಕ್ಷಕರನ್ನು ತಂದೆ ತಾಯಿಯವರನ್ನು ಗೌರವಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಟ್ರಸ್ಟಿ ಸದಸ್ಯರಾದ ಸುಭಾಶ್ಚಂದ್ರ ಶೆಟ್ಟಿ ಕೆ ಸ್ಪರ್ಧೆಯಲ್ಲಿ ಜಯಗಳಿಸಿದ ತಂಡಗಳಿಗೆ ಶುಭ ಹಾರೈಸಿದರು. ಚಿತ್ತಾರ 2026 ರ ಆಹ್ವಾನಿತ ಅಂತರ್ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ ಪಡುಕೆರೆ, ದ್ವಿತೀಯ ಸ್ಥಾನವನ್ನು ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ, ತೃತೀಯ ಸ್ಥಾನವನ್ನು ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸ್ಸಿಟ್ಯೂಷನ್ ತಮ್ಮದಾಗಿಸಿಕೊಂಡರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ ಮತ್ತು ಆಡಳಿತಾಧಿಕಾರಿ ಮೋಹನ ಕೆ.ಎನ್ ಹಾಗೂ ಚಿತ್ತಾರ- 2026 ರ ಸಂಯೋಜಕರಾದ ಡಾ. ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಯಾನಂದ ಎನ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಚಂದ್ರ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜೂ.6: ಮೀನುಗಾರಿಕೆ ಇಲಾಖೆಯ ವತಿಯಿಂದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ...

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆ: ಎಂ.ಪುರುಷೋತ್ತಮ್

ಉಡುಪಿ, ಜೂ.6: ಮನುಷ್ಯ ಸಂಕುಲ ಉಳಿವಿಗಾಗಿ ಪ್ರಕೃತಿ ಹಾಗೂ ಜೀವ ವೈವಿಧ್ಯಗಳು...

ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಕೋಟ, ಜೂ.6 ಕೋಟ ವಿವೇಕ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ...

ಪಂಚವರ್ಣ ಸಂಘಟನೆಯ ಸಾಮಾಜಿಕ ಬದ್ಧತೆ ಶ್ಲಾಘನೀಯ: ಸಂಪತ್ ಕುಮಾರ್ ಶೆಟ್ಟಿ

ಕೋಟ, ಜೂ.6: ಪಂಚವರ್ಣ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿ ಸಂಘಟನೆಯಾಗಿ ಮೂಡಿಬಂದಿದೆ,...
error: Content is protected !!