Tuesday, September 1, 2026
Tuesday, September 1, 2026

ಕಾರಂತರ ನೆನಪಿನಲ್ಲಿ ಪರಿಸರ ದಿನಾಚರಣೆ

ಕಾರಂತರ ನೆನಪಿನಲ್ಲಿ ಪರಿಸರ ದಿನಾಚರಣೆ

Date:

ಉಡುಪಿ, ಜೂ.6: ಡಾ.ಶಿವರಾಮ ಕಾರಂತರು ತಮ್ಮ ಕೃತಿಗಳಲ್ಲಿ ಕರಾವಳಿಯ ಪರಿಸರದ ಮಹತ್ವವನ್ನು ಸಾರಿದ್ದಾರೆ. ಪರಿಸರದ ಕುರಿತಾದ ಅವರ ಕಾಳಜಿಯು ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸುವ ಕಾರ್ಯವನ್ನು ಅವರು ನಡೆಸಿದ್ದಾರೆ. ಈ ದೃಷ್ಟಿಯಿಂದ ಅವರ ನೆನಪಿನಲ್ಲಿ ಪರಿಸರ ದಿನಾಚರಣೆಯನ್ನು ನಡೆಸುವುದು ಅರ್ಥಪೂರ್ಣ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ, ನಮ್ಮ ಮನೆ ನಮ್ಮ ಮರ ಅಭಿಯಾನ ತಂಡ, ಕನ್ನಡ ಸಾಹಿತ್ಯ ಪರಿಷತ್ತು ಸಹಭಾಗಿತ್ವದಲ್ಲಿ ಅಲೆವೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರಂತರ ನೆನಪಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್, ಪರಿಸರವು ಮಾನವ ಬದುಕಿನ ಜೀವದಾತುವಾಗಿದೆ. ಇದನ್ನು ಅರ್ಥ ಮಾಡಿಕೊಂಡರೆ ಪರಿಸರ ರಕ್ಷಣೆ ಸುಲಭ ಎಂದರು. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್.ಪಿ ಪ್ರಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಸದಸ್ಯೆ ದೀಪಾ ಕರ್ಕಿ, ಮಣಿಪಾಲ ರೇಡಿಯೋದ ಡಾ.ರಶ್ಮಿ ಅಮ್ಮೆಂಬಳ, ಆಕ್ಸಿಸ್ ಬ್ಯಾಂಕ್‌ನ ಜ್ಯೋತಿ ಶೆಟ್, ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಸತೀಶ್ ಕೊಡವೂರು, ಮೋಲ್ಟೋ ಕ್ಯಾರ್ ನ ಕೆ.ಆರ್ ತಂತ್ರಿ, ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಧಾನಮಂತ್ರಿ ಆವಾಸ್ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ, ಸೆ.1: ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯ ಸಮೀಕ್ಷೆ-2018 ರ ಶಾಶ್ವತ...

ಪ್ರೇರಣಾ ಶಿಬಿರ ಮೌಲ್ಯಯುತ ಬದುಕಿಗೆ ರಹದಾರಿ-ಪಿ.ಜಿ.ಆರ್. ಸಿಂಧ್ಯಾ

ಬಾರಕೂರು, ಸೆ.1: ರೇಂಜರ್ ರೋವರ್ಸ್ ಪ್ರೇರಣಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವನ್ನು...

ಭಯೋತ್ಪಾದನೆ ಕುರಿತು ದ್ವಿಮುಖ ನೀತಿಗಳಿಗೆ ಅವಕಾಶವಿಲ್ಲ: ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಪ್ರಧಾನಿ ಮೋದಿ

ಯು.ಬಿ.ಎನ್.ಡಿ., ಸೆ.1: ಪ್ರಧಾನಿ ನರೇಂದ್ರ ಮೋದಿ ಅವರು ಕಿರ್ಗಿಜ್ ಗಣರಾಜ್ಯದ ರಾಜಧಾನಿ...

ಅಜ್ಜಿ ಕಥೆ ಹೇಳುವ ಸ್ಪರ್ಧೆಯಲ್ಲಿ ಮನೋಜ್ಞ ದೇವಾಡಿಗಳಿಗೆ ದ್ವಿತೀಯ ಸ್ಥಾನ

ಉಡುಪಿ, ಸೆ.1: ಬೈಂದೂರಿನಲ್ಲಿ ನಡೆದ, "ಗಮ್ಮತ್ " ನಮ್ ಮಣ್ಣೂ ಭಾಷಿ...
error: Content is protected !!