Wednesday, May 6, 2026
Wednesday, May 6, 2026

ಯಕ್ಷಗಾನ ಕರಾವಳಿ ಜನರ ನಾಡಿಮಿಡಿತ: ಕೃಷ್ಣಮೂರ್ತಿ ಉರಾಳ

ಯಕ್ಷಗಾನ ಕರಾವಳಿ ಜನರ ನಾಡಿಮಿಡಿತ: ಕೃಷ್ಣಮೂರ್ತಿ ಉರಾಳ

Date:

ಕೋಟ, ಜೂ.28: ಯಕ್ಷಗಾನ ಕರಾವಳಿ ಭಾಗದ ಸಾಂಸ್ಕೃತಿಕ ರಾಯಭಾರಿ ಮಾತ್ರವಲ್ಲದೇ ಇಲ್ಲಿನ ಜನರ ನಾಡಿಮಿಡಿತವಾಗಿದೆ. ಕನ್ನಡ ಭಾಷೆಯ ಗಟ್ಟಿತನ ಯಕ್ಷಗಾನದಲ್ಲಿ ನಾವು ನೋಡಬಹುದು. ತಾಳಮದ್ದಳೆಗಳು ಪ್ರೇಕ್ಷಕ ವರ್ಗಕ್ಕೆ ಜ್ಞಾನ ಭಂಡಾರ ನೀಡುವುದಲ್ಲದೇ ಬದುಕಿಗೆ ಬೇಕಾದ ಮಹತ್ವ ಸಾರುವಲ್ಲಿ ಪಾತ್ರ ವಹಿಸುತ್ತದೆ. ಏಕವ್ಯಕ್ತಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ಆಯೋಜನಯ ಮೂಲಕ ಹೊಸ ಹವ್ಯಾಸಿ ಕಲಾವಿದರ ಸೃಷ್ಠಿಗೆ ದಾರಿದೀಪವಾಗಿದೆ ಎಂದು ಯಕ್ಷಗಾನ ಗುರು, ಚಿಂತಕ ಕೃಷ್ಣಮೂರ್ತಿ ಉರಾಳ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಸರೆಯಲ್ಲಿ ನಡೆದ ತಿಂಗಳ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಏಕವ್ಯಕ್ತಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಯಕ್ಷ ಸಾಹಿತಿ ಪಿ.ವಿ ಆನಂದ್, ಹಿಮ್ಮೇಳ ಸಂಯೋಜಕ ವೆಂಕಟೇಶ್ ವೈದ್ಯ, ಯು ಚಾನೆಲ್ ಮುಖ್ಯಸ್ಥ ಪ್ರಸಾದ್ ರಾವ್ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರವಾಸೋದ್ಯಮ ಸಚಿವರಿಗೆ ಸ್ವಾಗತ

ಮಂಗಳೂರು, ಮೇ 6: ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ...

ಕಾರಂತರ ಬದುಕಿನ ರೀತಿ ಹಿರಿಯ ನಾಗರಿಕರಿಗೆ ಮಾದರಿ: ನಿತ್ಯಾನಂದ ಪಡ್ರೆ

ಉಡುಪಿ, ಮೇ 5: ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಭಾವ...

ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಹಸ್ತಾಂತರ

ಕಾಪು, ಮೇ 5: ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ...
error: Content is protected !!