Tuesday, April 28, 2026
Tuesday, April 28, 2026

ರವಿರಾಜ್ ಎಚ್ ಪಿ ಹಾಗೂ ಶಶಿರಾಜ್ ಕಾವೂರ್ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ

ರವಿರಾಜ್ ಎಚ್ ಪಿ ಹಾಗೂ ಶಶಿರಾಜ್ ಕಾವೂರ್ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ

Date:

ಉಡುಪಿ, ಜೂ.28: ನಮ‌ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ಗುರುವಾರ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಿಜಿಕೆ ರಂಗ ಪುರಸ್ಕಾರ-2024 ನ್ನು ರಂಗಕರ್ಮಿಗಳಾದ ಉಡುಪಿಯ ರವಿರಾಜ ಎಚ್ ಪಿ ಮತ್ತು ಮಂಗಳೂರಿನ ಶಶಿರಾಜ್ ಕಾವೂರು ಅವರಿಗೆ ಹಿರಿಯ ವಿದ್ವಾಂಸ ನಾಡೋಜ ಡಾ. ಕೆ. ಪಿ. ರಾವ್ ಅವರು ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ರಂಗಭೂಮಿಯಿಂದ ಸಾಮಾಜಿಕ ಬದಲಾವಣೆಯಾಗುತ್ತದೆ. ಬಿ ವಿ ಕಾರಂತರಂತಹ ಶ್ರೇಷ್ಠ ಕಲಾವಿದರ ರಂಗಭೂಮಿ ಕ್ಷೇತ್ರದ ಕೊಡುಗೆ ಬಗ್ಗೆ ಮಾತನಾಡಿದರು.

ತುಳುಕೂಟ ಉಡುಪಿಯ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು
ಕಲಾವಿದ ಮೈಮ್ ರಾಮದಾಸ್ ಅವರು ಸಿಜಿಕೆ‌‌‌ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ,‌ ರಂಗಕರ್ಮಿ, ನಮ ತುಳುವೆರ್ ಕಲಾ ಸಂಘಟನೆಯ ಸುಕುಮಾರ್, ಮೋಹನ್ ಮುದ್ರಾಡಿ ಉಪಸ್ಥಿತರಿದ್ದರು.‌ ರಾಜೇಶ್ ಭಟ್ ಪಣಿಯಾಡಿ ವಂದಿಸಿ, ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಷ್ಟ್ರೀಯ ಗೋಮಾತೆ ಗೌರವ ಅಭಿಯಾನ ಸರಕಾರಕ್ಕೆ ಮನವಿ ಸಲ್ಲಿಕೆ

ಬ್ರಹ್ಮಾವರ, ಏ.27: ಗೋಮಾತೆಯ ಗೌರವ ಅಭಿಯಾನ ಅಂಗವಾಗಿ ಗೋಮಾತಾ ಗೌರವ ದಿನಾಚರಣೆಯನ್ನು...

ಕಸ್ತೂರ್ಬಾ ಆಸ್ಪತ್ರೆ: ವೃತ್ತಿಪರರ ಸಪ್ತಾಹ 2026 ಆಚರಣೆ

ಮಣಿಪಾಲ, ಏ.27: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಏಪ್ರಿಲ್ 25 ರಂದು ವೈದ್ಯಕೀಯ...

ಶ್ರೀ ಕೃಷ್ಣ ಮಠಕ್ಕೆ ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಭೇಟಿ

ಉಡುಪಿ, ಏ.27: ಪರ್ಯಾಯ ಶ್ರೀ ಶೀರೂರು ಮಠ ಪರ್ಯಾಯ ಪೀಠಾಧೀಶರಾದ ಶ್ರೀ...

ನಾಗಬನದಲ್ಲಿ ಅಪೂರ್ವ ಕಾರ್ಯಕ್ರಮ

ಉಡುಪಿ, ಏ.26: ಸುಮಾರು ಒಂದು ಸಾವಿರ ವರ್ಷಗಳ ಹಳೆಯ ಶ್ರೀ ನಾಗಬ್ರಹ್ಮಸ್ಥಾನ...
error: Content is protected !!