Friday, September 25, 2026
Friday, September 25, 2026

ಹಂಗಾರಕಟ್ಟೆ- ರಾಷ್ಟ್ರೀಯ ವಿಜ್ಞಾನ ದಿನ

ಹಂಗಾರಕಟ್ಟೆ- ರಾಷ್ಟ್ರೀಯ ವಿಜ್ಞಾನ ದಿನ

Date:

ಕೋಟ: ಜಗತ್ತಿಗೆ ವಿಜ್ಞಾನದ ಮಾದರಿಯನ್ನು ಸಿ ವಿ ರಾಮನ್ ಮೂಲಕ ಪರಿಚಯಿಸುದ ಹೆಗ್ಗಳಿಕೆ ನನ್ಮ ಭಾರತದ್ದು ಎಂದು ಮಾಬುಕಳದ ಚೇತನ ಪ್ರೌಢಶಾಲಾ ಮುಖ್ಯ ಶಿಕ್ಷಕ ಗಣೇಶ್ ಜಿ ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಟ್ಟೆ ಸಾಸ್ತಾನ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಇದರ ವಿಸ್ಮಯ ಶೀರ್ಷಿಕೆಯಡಿ ಕಾರ್ಯಕ್ರಮದಲ್ಲಿ ಮಾತನಾಡಿ, ಆಗಿನ ಕಾಲದಲ್ಲಿ ನೊಬೆಲ್ ಪ್ರಶಸ್ತಿ ಮೂಲಕ ವಿಶ್ವಮನ್ನಣೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು.

ವಿಜ್ಞಾನ ಅಂದರೇ ಸತ್ಯದ ಅನ್ವೇಷಣೆ, ಈ ಮೂಲಕ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ವಿಜ್ಞಾನದ ಕಡೆ ಮುಖಮಾಡಬೇಕಿದೆ. ತನ್ನಲ್ಲಿರುವ ಜ್ಞಾನದ ಸುಧೆ ಹರಿಸಿ ಹೊಸ ಹೊಸ ಆವಿಷ್ಕಾರಕ್ಕೆ ಮುಂದಡಿ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಇತ್ತರಲ್ಲದೆ ಇಂದು ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರೆದಿದೆ. ಎಲ್ಲಾ ಕ್ಷೇತ್ರದಲ್ಲೂ ವಿಜ್ಞಾನ ಪರಿಚಯಿಸಿಕೊಂಡಿದೆ. ಈ ದಿಸೆಯಲ್ಲಿ ಅಭಿವೃದ್ಧಿ ಪೂರಕವಾಗುವ ಆವಿಷ್ಕಾರಗಳ ಬಗ್ಗೆ ಗಮನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಛೇರಿ ಉಡುಪಿ ಇದರ ಡಿವೈಪಿಸಿ ಚಂದ್ರ ನಾಯ್ಕ್ ಸಿ ವಿ ರಾಮನ್ ರೇಖಾಚಿತ್ರವನ್ನು ಅನಾವರಣಗೊಳಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಡೆನಿಸ್ ಡಿಸೋಜ ವಹಿಸಿದ್ದರು.

ವಿಜ್ಞಾನ ಮಾದರಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಮನ್ವಿತ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಡಾ.ಕೆ.ಶಿವರಾಮ ಕಾರಂತ ಹಾಗೂ ಗೋಪಾಲ ನಾಯ್ಕ್ ಹೆಸರಿನಲ್ಲಿ ದತ್ತಿನಿಧಿ ಪುರಸ್ಕಾರ ನೀಡಲಾಯಿತು.

ಅತಿಥಿಗಳಾಗಿ ಉಡುಪಿ ಡಯೇಟ್ ಉಪನ್ಯಾಸಕಿ ಶೋಭಾ, ಬ್ರಹ್ಮಾವರ ಕ್ಷೇತ್ರ ಸಮನ್ವಯ ಅಧಿಕಾರಿ ಅರ್ಚನ, ಬ್ರಹ್ಮಾವರ ವಲಯ ಪ್ರಾಥಮಿಕ ಶಿಕ್ಷಕರ ಸಂಘ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಅಗಸ್ತ್ಯ ಫೌಂಡೇಶನ್ ಇದರ ಕಿರಣ್ ಕುಮಾರ್, ಶಾಲಾ ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಮೊಹಂತಿ, ಶಾಲಾ ಹಿರಿಯ ವಿದ್ಯಾರ್ಥಿ ಪರೀಕ್ಷಿತ್, ಸಮಿತ್ರ ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸೇಸು ಸ್ವಾಗತಿಸಿದರು.ವಿಜ್ಞಾನ ಶಿಕ್ಷಕಿ ವೀಣಾ ಪ್ರಾಸ್ತಾವನೆಗೈದರು. ಶಿಕ್ಷಕಿ ಉಷಾರಾಣಿ ವಂದನಾರ್ಪಣೆಗೈದರು. ವಿದ್ಯಾರ್ಥಿಗಳಾದ ವೈಷ್ಣವಿ, ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರಂತರು ಕರ್ನಾಟಕದ ವೈಚಾರಿಕ ಪ್ರಜ್ಞೆಯ ಪ್ರತಿನಿಧಿ: ಸಚಿವ ಶಿವರಾಜ ಎಸ್ ತಂಗಡಗಿ

ಉಡುಪಿ, ಸೆ.25: ಡಾ. ಶಿವರಾಮ ಕಾರಂತರು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ...

ಮಣಿಪಾಲ ಜ್ಞಾನಸುಧಾ: ಜಿಲ್ಲಾಮಟ್ಟದ ಫುಟ್ಬಾಲ್‌ ಪಂದ್ಯಾಟ

ಮಣಿಪಾಲ, ಸೆ.25: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ...

ಬಾಸ್ಕೆಟ್ ಬಾಲ್: ಕಾರ್ಕಳ ಜ್ಞಾನಸುಧಾದ ಸಮರ್ಥ್ ಕೆ.ಯು ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ, ಸೆ.25: ಶಾಲಾ ಶಿಕ್ಷಣ ಇಲಾಖೆ (ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ...

ಯುವಕರು ವಿದ್ಯಾವಂತರಾಗುವುದರ ಜೊತೆಗೆ ಹೃದಯವಂತರಾಗಬೇಕು

ತೆಂಕನಿಡಿಯೂರು, ಸೆ.25: ಇಂದಿನ ಹೊಸ ತಲೆಮಾರಿನ ಯುವಕ-ಯುವತಿಯರು ವಿದ್ಯಾವಂತರಾಗುವುದರ ಜೊತೆಗೆ ಪ್ರೀತಿ,...
error: Content is protected !!