Sunday, July 26, 2026
Sunday, July 26, 2026

ಬಿಜೆಪಿ ಹೆರ್ಗ ಮಹಾ ಶಕ್ತಿಕೇಂದ್ರದಲ್ಲಿ ಸಮರ್ಪಣಾ ದಿನಾಚರಣೆ

ಬಿಜೆಪಿ ಹೆರ್ಗ ಮಹಾ ಶಕ್ತಿಕೇಂದ್ರದಲ್ಲಿ ಸಮರ್ಪಣಾ ದಿನಾಚರಣೆ

Date:

ಮಣಿಪಾಲ: ಭಾರತೀಯ ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಬಲಿದಾನದ ದಿನವನ್ನು ಸಮರ್ಪಣಾ ದಿನವಾಗಿ ಬಿಜೆಪಿ ಹೆರ್ಗ ಮಹಾ ಶಕ್ತಿಕೇಂದ್ರದ ವತಿಯಿಂದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಚರಿಸಲಾಯಿತು.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಧರ್ಮ ಜಾಗರಣ ಸಮನ್ವಯ ಪೂರ್ಣಾವಧಿ ಕಾರ್ಯಕರ್ತ ಅಶೋಕ್ ಪರ್ಕಳ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜೀವನಾದರ್ಶಗಳ ಬಗ್ಗೆ ಉಪನ್ಯಾಸವನ್ನು ನಡೆಸಿಕೊಟ್ಟರು.

ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪಕ್ಷದ ಚಟುವಟಿಕೆಗಳಿಗೆ ನಿಧಿ ಸಮರ್ಪಣೆ ಮಾಡಲಾಯಿತು.

ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ, ಹೆರ್ಗ ಮಹಾ ಶಕ್ತಿಕೇಂದ್ರದ ಉಸ್ತುವಾರಿ ಶಿವಕುಮಾರ್ ಅಂಬಲಪಾಡಿ, ಮಹಾ ಶಕ್ತಿಕೇಂದ್ರದ ಸಹ ಸಂಚಾಲಕ ಶಿವಾನಂದ್ ಕಾಮತ್, ಉಡುಪಿ ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ವಿಜಯಲಕ್ಷ್ಮಿ, ಅಶ್ವಿನಿ ಅರುಣ್ ಪೂಜಾರಿ, ಹೆರ್ಗ ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಶಕ್ತಿಕೇಂದ್ರಗಳು ಮತ್ತು ಬೂತ್ ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!