Sunday, July 26, 2026
Sunday, July 26, 2026

ಯುವಜನತೆಯಿಂದ ಜನಪರ ಕಾರ್ಯಕ್ರಮಗಳು ಜೀವಂತ: ಸಾಧು ಪಾಣರ

ಯುವಜನತೆಯಿಂದ ಜನಪರ ಕಾರ್ಯಕ್ರಮಗಳು ಜೀವಂತ: ಸಾಧು ಪಾಣರ

Date:

ಉಡುಪಿ: ಯುವಜನತೆ ಜನಪರ ಮೌಲ್ಯಗಳನ್ನು ಅರಿತು, ಸಮಾಜದಲ್ಲಿ ಮುಂದಿನ ಪೀಳಿಗೆಗಳಿಗೆ ಜನಪರ ಕಾರ್ಯಕ್ರಮಗಳನ್ನು ಜೀವಂತವಾಗಿರಿಸಲು ಸಹಕರಿಸುವಂತೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧು ಪಾಣರ ಹೇಳಿದರು.

ಅವರು ಅಲೆವೂರು ಪ್ರಗತಿನಗರದ ಡಾ. ಶಿವರಾಮ ಕಾರಂತ ಕಲಾಗ್ರಾಮದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಂಗಣದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರು ಆಚರಿಸಿಕೊಂಡು ಬಂದಿರುವ ಜನಪದ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಕಾಲಕ್ರಮೇಣ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಜನಪರ ಉತ್ಸವ ಕಾರ್ಯಕ್ರಮಗಳು ಅನಿವಾರ್ಯವಾಗಿದ್ದು, ಜಾನಪದ ಮೌಲ್ಯಗಳ ಉಳಿವಿಗೆ ನಾವೆಲ್ಲ ನೆರವಾಗಬೇಕು ಎಂದರು.

ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕು. ಜಾನಪದ ಪರಂಪರೆಯ ಉಳಿವಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಇನ್ನಷ್ಟು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಯುವ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಎಂದರೆ ಜನರಿಂದ-ಜನರಿಗೆ, ಜ್ಞಾನದಿಂದ- ಜ್ಞಾನಕ್ಕೆ, ಅಂದರೆ ಗ್ರಾಮೀಣ ಭಾಗದ ಜನರು ಕೃಷಿ ಕೆಲಸ ಮಾಡುವಾಗ ಬಾಯಿಯಿಂದ ಬರುವ ಪದ್ಯ. ಅದು ಅಲ್ಲೇ ಹುಟ್ಟುವಂತದ್ದು. ಈ ಜಾನಪದವನ್ನು ಉಳಿಸುವಂತಹ ಪ್ರಯತ್ನವಾಗಬೇಕು. ಜನಪದ ಕಾರ್ಯಕ್ರಮಗಳನ್ನು ಮಾಡುವುದರಿಂದ ಯುವಜನರನ್ನು ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತಹ ಕೆಲಸವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಾನಪದ ಕಲಾವಿದ ರಮೇಶ್ ಕಲ್ಮಾಡಿ, ಜನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ಪ್ರದೀಪ್ ಡಿ.ಎಮ್. ಹಾವಂಜೆ ನಿರೂಪಿಸಿ, ರಾಮು ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!