Tuesday, September 22, 2026
Tuesday, September 22, 2026

ಸಾಧನ -2022: ವೃತ್ತಿಶ್ರೇಷ್ಠರಿಗೆ ಸನ್ಮಾನ

ಸಾಧನ -2022: ವೃತ್ತಿಶ್ರೇಷ್ಠರಿಗೆ ಸನ್ಮಾನ

Date:

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ವೃತ್ತಿಪರ ಮಾಸದಲ್ಲಿ ಸ್ವಹಿತ ಮೀರಿದ ಸೇವೆಯ ವೃತ್ತಿ ಶ್ರೇಷ್ಠರಿಗೆ ಸನ್ಮಾನಿಸುವ ಕಾರ್ಯಕ್ರಮ ಸಾಧನ -2022 ಚೇತನ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಸಲಾಯಿತು.
ಸರ್ವಕ್ಷೇಮ ಆಸ್ಪತ್ರೆ ಮತ್ತು ರಿಸರ್ಚ್ ಫೌಂಡೇಶನ್ ಮೂಡುಗಿಳಿಯಾರು ಇದರ ಎಂ.ಡಿ. ಡಾ. ವಿವೇಕ ಎ. ಉಡುಪ ಅವರನ್ನು ಹಾಗೆಯೇ ಶ್ರೀ ವೆಂಕಟೇಶ್ವರ ಸ್ವೀಟ್ಸ್ ಮಾಲಕ ಪಿ ಲಕ್ಷ್ಮೀನಾರಾಯಣ ರಾವ್ ಇವರನ್ನು ಸ್ವಹಿತ ಮೀರಿದ ಸೇವೆಗಾಗಿ ವೃತ್ತಿ ಶ್ರೇಷ್ಠರೆಂದು ಗುರುತಿಸಿ ಸನ್ಮಾನಿಸಲಾಯಿತು.

ಡಾ. ವಿವೇಕ ಉಡುಪ ಅವರು ಯೋಗ ಚಿಕಿತ್ಸೆ, ಆರೋಗ್ಯಕರ ಜೀವನ ಕ್ರಮ ಮತ್ತು ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು. ರೋಟರಿ ಜಿಲ್ಲಾ 3182 ಇದರ ವೃತ್ತಿಪರ ಅವಾರ್ಡ್ ಕಮಿಟಿ ಚೇರ್ಮೆನ್ ಪುಂಡಲೀಕ ಮರಾಠೆ ಹಾಗೂ ರೋಟರಿ ವಲಯ 3ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್, ಯೋಗ ಗುರು ಡಾ. ವಿದ್ವಾನ್ ವಿಜಯ ಮಂಜರ್ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ಯಶೋಧ ಸಿ. ಹೊಳ್ಳ ವಹಿಸಿದ್ದರು. ನರೇಂದ್ರ ಕುಮಾರ್ ಕೋಟ ಮತ್ತು ವಿಜ್ಞೇಶ್ವರ ಅಡಿಗ ಅಭಿನಂದನ ನುಡುಗಳನ್ನು ವಾಚಿಸಿದರು. ಕ್ಲಬ್‌ನ ವೃತ್ತಿಪರ ನಿರ್ದೇಶಕ ಆನಂದ ಎಂ., ಚೆರ್ಮೆನ್ ಪಿ.ಸಿ. ಹೊಳ್ಳ, ರೋಟರಿ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಪ್ರೇರಣಾ ಮತ್ತು ಸಾನ್ವಿ ವಿಭಾಗ ಮಟ್ಟಕ್ಕೆ ಆಯ್ಕೆ

ಉಡುಪಿ, ಸೆ.22: ಉಡುಪಿ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ...

ಓಪನ್‌ ಎಐ ಸೆಲೆಕ್ಟ್ ಪಾರ್ಟ್ನರ್ ಆಗಿ ಫೋರ್ಥ್‌ ಫೋಕಸ್ ಆಯ್ಕೆ

ಕುಂದಾಪುರ,  ಸೆ.22: ಕರ್ನಾಟಕ ಮೂಲದ ತಂತ್ರಜ್ಞಾನ ಸಂಸ್ಥೆ ಫೋರ್ಥ್‌ಫೋಕಸ್, ಜಾಗತಿಕ ಓಪನ್‌ಎಐ...

ಒಂದು ವರ್ಷ ಪೂರ್ಣಗೊಳಿಸಿದ ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್

ಮಣಿಪಾಲ, ಸೆ. 21 ಸೆಪ್ಟೆಂಬರ್ 2026 : ಮಣಿಪಾಲ ಅಕಾಡೆಮಿ ಆಫ್...
error: Content is protected !!