Saturday, October 17, 2026
Saturday, October 17, 2026

ಪಿಲಾರ್ಕಾನ ಶ್ರೀ ಮಹಾಲಿಂಗೇಶ್ವರ ದೇವಾಲಯ

ಪಿಲಾರ್ಕಾನ ಶ್ರೀ ಮಹಾಲಿಂಗೇಶ್ವರ ದೇವಾಲಯ

Date:

ಶಿರ್ವ-ಬೆಳ್ಮಣುಗಳ‌ ನಡುವೆ ಇರುವ ಗ್ರಾಮವೇ ಪಿಲಾರ್/ಪಿಲಾರ್ಕಾನ. ಪಿಲಾರ್ಕಾನ‌ ಎಂದರೆ ಸಮೃದ್ಧವಾದ ಕಾಡಿನ‌ ಪ್ರದೇಶವೆಂದು ಹೇಳಬಹುದು.

ಶ್ರೀ‌ ಮಹಾಲಿಂಗೇಶ್ವರ ದೇವಾಲಯ: ಮುಖ್ಯ ಮಾರ್ಗದಿಂದ ಸುಮಾರು 200 ಮೀ. ಕಾಡಿನ ಒಳಗೆ ಈ ದೇವಾಲಯವಿದೆ. ಇಲ್ಲಿಗೆ ಬರುವಂತಹ ಭಕ್ತರುಗಳು ದೇವಾಲಯಕ್ಕೆ 11 ಬಾರಿ ಪ್ರದಕ್ಷಿಣೆ ಮಾಡಿದರೆ ಅಥವಾ 48 ಬಾರಿ ಪ್ರದಕ್ಷಿಣೆ ಮಾಡಿದರೆ ಅವರಂದುಕೊಂಡ ಕಾರ್ಯಗಳು ಈಡೇರುತ್ತವೆ ಎಂಬ ನಂಬಿಕೆ‌ ಈಗಲೂ ಇದೆ‌.ದಂತಕಥೆಯ ಪ್ರಕಾರ ಈ‌ ದೇವಾಲಯವನ್ನು ಭಾರ್ಗವ ಮುನಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿದ್ದಾರೆಂದು ಹೇಳಲಾಗುತ್ತದೆ.

ಈ ದೇವಾಲಯಕ್ಕೆ ಆರು ಕ್ಷೇತ್ರಗಳಾದ ಸುಬ್ರಹ್ಮಣ್ಯ, ಸಾಂತೂರು, ಸೂಡ, ಶಾಸ್ತಾವೂ, ಕಳತ್ತೂರು ಮತ್ತು ಪಾದೂರು ಸೇರುತ್ತದೆ. ಶಿಲಾಮಯವಾಗಿರುವ ಈ ದೇವಾಲಯವು ಗರ್ಭಗೃಹ, ತೀರ್ಥ ಮಂಟಪ, ಪ್ರಾಕಾರ ಮಂಟಪ, ಮತ್ತು‌ ಮಹಾದ್ವಾರವನ್ನೊಳಗೊಂಡಿದೆ. ಗರ್ಭಗುಡಿಯ ಪಾಣಿಪೀಠದಲ್ಲಿ ಶಿವಲಿಂಗದ ಬದಲು ಚತುರ್ಮುಖವುಳ್ಳ ಶಿವನ‌ ವಿಗ್ರಹವಿದ್ದು, ಏಕಕಾಲದಲ್ಲಿ ನಾಲ್ಕು ದಿಕ್ಕುಗಳಿಗೂ ಮುಖಮಾಡಿ ಧ್ಯಾನರೂಢನಾಗಿ ಕುಳಿತಿರುವಂತೆ ಭಾಸವಾಗುತ್ತದೆ.

ಗರ್ಭಗುಡಿಗೆ ಅಭಿಮುಖವಾಗಿ ನಂದಿ ವಿಗ್ರಹವಿದ್ದು, ಇದಕ್ಕೆ ಒಂದು ಐತಿಹ್ಯವಿದೆ ಏನೆಂದರೆ ಎಲ್ಲೂರು ದೇವಾಲಯದ ಅರ್ಚಕರು ಈ ನಂದಿಗೆ ಬೈದಿರುವುದಕ್ಕೆ ನಂದಿಯು ಈ ದೇವಾಲಯಕ್ಕೆ ಬಂದಿತ್ತು ಎಂಬ ಪ್ರತೀತಿ‌ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಕೂಡ ನಂದಿಯ ಕಾಲಿನ ಹೆಜ್ಜೆಯ ಗುರುತನ್ನು ಈ ದೇವಾಲಯದಲ್ಲಿ ಕಾಣಬಹುದು.

ಧ್ಯಾನರೂಢ ಚತುರ್ಮುಖ ಶಿವನ ಕಲ್ಪನೆ‌ ರಾಷ್ಟ್ರಕೂಟ ಕಾಲದಲ್ಲಿ ಕಾಣುತ್ತೇವೆ. ಹಾಗೆಯೇ ಎಲಿಫೆಂಟಾದ ಗುಹಾಲಯದಲ್ಲಿ ಬ್ರಹತ್ ಚತುರ್ಮುಖ ಶಿವನ ಶಿಲಾವಿಗ್ರಹವನ್ನು ನೋಡಬಹುದು. ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಕಲ್ಪನೆಯನ್ನು ಪಿಲಾರ್ಕಾನದ ಶ್ರೀ‌ ಮಹಾಲಿಂಗೇಶ್ವರ ದೇವಾಲಯವು ಪುಷ್ಟೀಕರಿಸುವಂತಿದೆ. ದೇವಾಲಯದ ವಾಸ್ತುಶೈಲಿಯನ್ನು ಆಧಾರವಾಗಿರಿಸಿಕೊಂಡು ಈ ದೇವಾಲಯವು ಸುಮಾರು 9-10ನೇಯ ಶತಮಾನಕ್ಕೆ ಸೇರಿದೆ ಎಂದು ಹೇಳಬಹುದು. ಶ್ರೀ‌ ಮಹಾಲಿಂಗೇಶ್ವರ ದೇವಾಲಯವು ಚತುರ್ಮುಖ ಶಿವನ ಆರಾಧನೆ ‌ಇರುವ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿದ್ದು, ಹಚ್ಚ ಹಸುರಿನ ಕಾಡಿನ ನಡುವೆ ಕಂಗೊಳಿಸುವುದರ ಜೊತೆಗೆ ಭಕ್ತರ ನೆಚ್ಚಿನ‌ ತಾಣವಾಗಿದೆ.

ಸಂಗ್ರಹ: ದಿವ್ಯ
ಅಂತಿಮ ಬಿ.ಎ.ವಿದ್ಯಾರ್ಥಿನಿ,
ಎಂ.ಎಸ್.ಆರ್.ಎಸ್. ಕಾಲೇಜು ಶಿರ್ವ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!