Tuesday, November 10, 2026
Tuesday, November 10, 2026

ಕರ್ನಾಟಕ ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ನಿಯಮಗಳು

ಕರ್ನಾಟಕ ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ನಿಯಮಗಳು

Date:

ಉಡುಪಿ, ಅ.16: ಕರ್ನಾಟಕ ನೈರುತ್ಯ ಪದವೀಧರರ/ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಮತದಾರರ ನೋಂದಣಿ ನಿಯಮಗಳು ಈ ಕೆಳಗಿನಂತಿವೆ. ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆಗೆ ಮತದಾರರ ನೋಂದಣಿ ನಿಯಮಗಳು 1960 ರ 31(4) ನೇ ನಿಯಮದ ಅನುಸಾರ ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಮತ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು ಸಂಬಂಧಿಸಿದ ಶಿಕ್ಷಕರ ಮತ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ನೋಂದಣಿ ನಿಯಮಗಳು 1960 ಕ್ಕೆ ಲಗತ್ತಿಸಿರುವ ಮತ್ತು ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿರುವ ನಮೂನೆ -19 ರಲ್ಲಿ ಅರ್ಜಿಯನ್ನು 2023 ರ ನವೆಂಬರ್ 6 ಅಥವಾ ಅದಕ್ಕೂ ಮೊದಲು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಮೇಲೆ ತಿಳಿಸಲಾದ ಎಲ್ಲಾ ವ್ಯಕ್ತಿಗಳು ತಮ್ಮ ಹೆಸರನ್ನು ಇದುವರೆಗೂ ಸೇರಿಸದೆ ಇದ್ದಲ್ಲಿ ನಿಗದಿತ ನಮೂನೆ -19 ರಲ್ಲಿ 2023 ರ ನವೆಂಬರ್ 6 ರ ಒಳಗೆ ಅಥವಾ ಅದಕ್ಕೂ ಮುಂಚೆ ಅರ್ಜಿಗಳನ್ನು ಸಲ್ಲಿಸಬಹುದು.

ನೈರುತ್ಯ ಪದವೀಧರರ ಕ್ಷೇತ್ರದ ಮತಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆಗೆ ಮತದಾರರ ನೋಂದಣಿ ನಿಯಮಗಳು 1960 ರ 31(4) ನೇ ನಿಯಮದ ಅನುಸಾರ ಕರ್ನಾಟಕ ನೈರುತ್ಯ ಪದವೀಧರ ಮತ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು ಸಂಬಂಧಿಸಿದ ಪದವೀಧರರ ಮತ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ನೋಂದಣಿ ನಿಯಮಗಳು 1960 ಕ್ಕೆ ಲಗತ್ತಿಸಿರುವ ಮತ್ತು ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿರುವ ನಮೂನೆ -18 ರಲ್ಲಿ ಅರ್ಜಿಯನ್ನು 2023 ರ ನವೆಂಬರ್ 6 ಅಥವಾ ಅದಕ್ಕೂ ಮೊದಲು ಸಂಬAದಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಮೇಲೆ ತಿಳಿಸಲಾದ ಎಲ್ಲಾ ವ್ಯಕ್ತಿಗಳು ತಮ್ಮ ಹೆಸರನ್ನು ಇದುವರೆಗೂ ಸೇರಿಸದೆ ಇದ್ದಲ್ಲಿ ನಿಗದಿತ ನಮೂನೆ -18 ರಲ್ಲಿ 2023 ರ ನವೆಂಬರ್ 6 ರ ಒಳಗೆ ಅಥವಾ ಅದಕ್ಕೂ ಮುಂಚೆ ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ವೆಬ್‌ಸೈಟ್ http://www.ceokarnataka.kar.nic.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ನೈರುತ್ಯ ಪದವೀಧರರ/ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ; ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​

ಕ್ರೀಡಾ ಕ್ಷೇತ್ರದೊಂದಿಗೆ ಸಾಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ...

ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ: ಸಾಹಿತಿ ಇಂದಿರಾ ಹಾಲಂಬಿ

ಉಡುಪಿ, ನ.9: ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ...

ಶ್ರೀಕೃಷ್ಣ ಮಠದಲ್ಲಿ ಗೋಪೂಜೆ ಸಂಭ್ರಮ; ರಥಬೀದಿಯಲ್ಲಿ ವೈಭವದ ಗೋ-ಮೆರವಣಿಗೆ

ಉಡುಪಿ, ನ.9: ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ವೈಭವದಿಂದ ನಡೆಯಿತು....

ದೀಪಾವಳಿ: ಬೆಳಕಿನ ಹಬ್ಬದ ಸಮಗ್ರ ಇತಿಹಾಸ, ಪೌರಾಣಿಕ ಹಿನ್ನೆಲೆ ಮತ್ತು ಆಚರಣೆಗಳು

ದೀಪಾವಳಿ ಅಥವಾ ದೀಪಾವಳೀ ಎಂದರೆ ಸಂಸ್ಕೃತದಲ್ಲಿ 'ದೀಪಗಳ ಆವಳಿ' (ಸಾಲು ಸಾಲು...
error: Content is protected !!