Thursday, May 21, 2026
Thursday, May 21, 2026

ಮಣೂರು ಪಡುಕರೆ: ವಿವಿಧ ಸೌಲಭ್ಯಗಳ ಉದ್ಘಾಟನೆ

ಮಣೂರು ಪಡುಕರೆ: ವಿವಿಧ ಸೌಲಭ್ಯಗಳ ಉದ್ಘಾಟನೆ

Date:

ಕೋಟ, ಸೆ. 17: ಗ್ರಾಮೀಣ ಭಾಗದ, ಸರಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೌಶಲಗಳ ಕಲಿಕೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಸಮಾಜ ಸೇವಾ ಫೌಂಡೇಶನ್‌ನ ಆದ್ಯತೆಯಾಗಿದೆ ಎಂದು ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ ಕುಂದರ್ ಅಭಿಪ್ರಾಯಪಟ್ಟರು. ಸರಕಾರಿ ಪದವಿಪೂರ್ವ ಕಾಲೇಜು ಮಣೂರು ಪಡುಕರೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಚಿತ ಕಂಪ್ಯೂಟರ್ ತರಗತಿ ಮತ್ತು ಆನ್‌ಲೈನ್ ಸಿಇಟಿ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೀತಾನಂದ ಫೌಂಡೇಶನ್‌ನ ವತಿಯಿಂದ ನೀಡಿದ ಗುರುತು ಪತ್ರಗಳನ್ನು ವಿದ್ಯಾರ್ಥಿಗಳಿಗೆ ಅವರು ವಿತರಿಸಿದರು.

‘ಫೆಸ್ಟ್ ಡಾಟ್ ಕಾಮ್’ ಉದ್ಘಾಟನೆ: ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನ ವಿಷಯದ ಪರಿಕಲ್ಪನೆಗಳನ್ನು ಆಧರಿಸಿ ರಚಿಸಿದ ಮಾದರಿಗಳ ಪ್ರದರ್ಶನ ‘ಫೆಸ್ಟ್ ಡಾಟ್ ಕಾಮ್’ಗೆ ಆನಂದ ಸಿ ಕುಂದರ್ ಚಾಲನೆ ನೀಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆಯ ಪ್ರಾಂಶುಪಾಲರಾದ ಡಾ. ಸುನೀತಾ, ಪ್ರಾಧ್ಯಾಪಕರಾದ ಶಂಕರ್ ನಾಯ್ಕ್, ಕಾಲೇಜು ಶೈಕ್ಷಣಿಕ ಸಮಿತಿಯ ಸದಸ್ಯರಾದ ಜಯರಾಮ ಶೆಟ್ಟಿ, ಗೀತಾನಂದ ಫೌಂಡೇಶನ್‌ನ ಸಮಾಜಕಾರ್ಯ ವಿಭಾಗದ ಸಂಯೋಜಕ ರವಿಕಿರಣ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡೆನಿಸ್ ಬಾಂಜಿ ಸ್ವಾಗತಿಸಿ, ಉಪನ್ಯಾಸಕ ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕುಂದಾಪುರ, ಮೇ 21: ಇಲ್ಲಿನ ಅಂಪಾರು ಗ್ರಾಮದ ಬಲಾಡಿ ಕಲ್‌ತ್ತೋಡ್ಮಿ ಮನೆ...

ನಗರಸಭೆ: ಸಹಾಯವಾಣಿ ಸ್ಥಾಪನೆ

ಉಡುಪಿ, ಮೇ 21: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು...

61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ಉಡುಪಿ, ಮೇ 21: ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986...

ಮಾನಸಿಕ ಆರೋಗ್ಯದಂತಹ ಕಾರ್ಯಕ್ರಮಗಳು ಯುವಜನತೆಗೆ ಅಗತ್ಯ: ಡಾ. ಪಿ.ವಿ ಭಂಡಾರಿ

ತೆಂಕನಿಡಿಯೂರು, ಮೇ 21: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ...
error: Content is protected !!